ದಾವಣಗೆರೆ, ನ. 22 – ನಗರದ ಬಾಪೂಜಿ ಇನ್‌ಸ್ಟಿಟ್ಯೂಟ್ ಆಫ್ ಹೈಟೆಕ್ ಎಜುಕೇಷನ್, ವಾಣಿಜ್ಯ ವಿಭಾಗದಿಂದ ಡಿಸೆಂಬರ್ 2ರ ಸೋಮವಾರ ಪಿಯುಸಿ ವಿದ್ಯಾರ್ಥಿಗಳಿಗಾಗಿ ಸೃಜನಶೀಲತೆ ಹಾಗೂ ಕೌಶಲ್ಯ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ವಿನೂತನವಾಗಿ ವಾಣಿಜ್ಯ ಪ್ರದರ್ಶನ ಆಯೋಜಿಸಲಾಗಿದೆ. 6ನೇ ವಾಣಿಜ್ಯೋತ್ಸವ-2024ರ ಅಂಗವಾಗಿ ಮಾಡೆಲ್ ಪ್ರಸ್ತುತಿ, ಪೋಸ್ಟರ್ ಪ್ರಸ್ತುತಿ, ಮಾರ್ಕೆಟಿಂಗ್ ಸ್ಟೋರೀಸ್, ಕರೆನ್ಸಿ ಅಂಡ್ ಸ್ಟ್ಯಾಂಪ್ ಎಕ್ಸಿಬ್ಯುಶನ್, ಬ್ಯುಸಿನೆಸ್ ಐಡಿಯಾತನ್, ಬ್ಯುಸಿನೆಸ್ ಕ್ವಿಜ್ ಮತ್ತು ಸಂಸ್ಕೃತಿ ಕಲಾತ್ಮಕ ನೃತ್ಯ ಸ್ಪರ್ಧೆಗಳಿದ್ದು, ವಿಜೇತರಿಗೆ ಆಕರ್ಷಕ ಬಹುಮಾನ ಮತ್ತು ಭಾಗವಹಿಸಿದವರಿಗೆ ಪ್ರಮಾಣ ಪತ್ರ ವಿತರಿಸಲಾಗುವುದೆಂದು ನಿರ್ದೇಶಕ ಡಾ. ಸ್ವಾಮಿ ತ್ರಿಭುವಾನಂದ ಹೆಚ್.ವಿ.ತಿಳಿಸಿದ್ದಾರೆ.
January 12, 2025