ನಗರದಲ್ಲಿ ಇಂದು ಜಾಗೃತಿ ಕಾರ್ಯಾಗಾರ

ಬಿ.ಡಿ.ಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂದು ಬೆಳಿಗ್ಗೆ 9.30ಕ್ಕೆ ಕಾಲೇಜಿನ ಆರ್ ಮತ್ತು ಡಿ ಬ್ಲಾಕ್‌ನಲ್ಲಿ ‘ಕೆಲಸದ ಸ್ಥಳದಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ’ ವಿಷಯ ಕುರಿತು ಒಂದು ದಿನದ ಜಾಗೃತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.

ಕಾರ್ಯಾಗಾರದಲ್ಲಿ ವಕೀಲರಾದ ಎಂ.ಎನ್. ಮಧುರಾ, ಜೆಜೆಎಂ ಕಾಲೇಜಿನ ಪ್ರೊ. ಡಾ.ಶೋಭಾ ಧನಂಜಯ, ಪಿ. ಶಶಿಕಲಾ ಪಾಲ್ಗೊಳ್ಳಲಿದ್ದು, ಬಿಡಿಟಿ ವಿಶ್ವವಿದ್ಯಾಲಯದ ಡಾ.ಡಿ.ಪಿ.ನಾಗರಾಜಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ.

error: Content is protected !!