ಹರಿಹರದ ಕೋಟೆ ಬಡಾ ವಣೆಯ ಶ್ರೀ ಓಂಕಾರ ಮಠದಲ್ಲಿ ಶ್ರೀ ಶಿವಾನಂದ ತೀರ್ಥ ಸ್ವಾಮಿ ಗಳವರ 76ನೇ ವರ್ಷದ ಆರಾ ಧಾನ ಮಹೋತ್ಸವವು ಇಂದು ನಡೆಯಲಿದೆ ಎಂದು ಸ್ವಾಮಿ ಶ್ರೀ ಶಿವಾನಂದ ತೀರ್ಥ ಟ್ರಸ್ಟ್ ಅಧ್ಯಕ್ಷ ಎಂ. ರಮೇಶ್ ನಾಯ್ಕ್ ತಿಳಿಸಿದರು. ಇಂದು ಬೆಳಿಗ್ಗೆ 7 ಗಂಟೆಗೆ ಮಹಾನ್ಯಾಸ ಪೂರ್ವಕ ರುದ್ರಾಭಿಷೇಕ, ಬೆಳಗ್ಗೆ 11 ಗಂಟೆಗೆ ಶ್ರೀಗಳವರ ಆರಾಧನಾ ನಂತರ ತೀರ್ಥ ಪ್ರಸಾದ ವಿನಿಯೋಗ, ಸಂಜೆ 6 ಗಂಟೆಗೆ ಶ್ರೀ ಮಠದ ಪಾಲಕಿ ಉತ್ಸವ ಅಷ್ಟಾವಧಾನ ಸೇವಾ, ಗುರು ಭಜನಾ ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ.
January 22, 2025