ದಾವಣಗೆರೆ, ನ.18- ಸಿಎಂ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಶಾಸಕ ರವಿ ಗಾಣಿಗ ಅವರು ಈಗಿರುವ ಸರ್ಕಾರ ಪತನಗೊಳಿಸಲು ಬಿಜೆಪಿಯವರು ಕಾಂಗ್ರೆಸ್ ಶಾಸಕರಿಗೆ ತಲಾ 50 ಕೋಟಿ ರೂ.ಗಳ ಆಮಿಷ ಒಡ್ಡಿದ್ದಾರೆ ಎಂದು ಮುಖ್ಯಮಂತ್ರಿಗಳು ಟಿ. ನರಸೀಪುರ ಕ್ಷೇತ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆರೋಪಿಸಿದ್ದಾರೆ.
ಅದೇ ರೀತಿ ಕಾಂಗ್ರೆಸ್ ಶಾಸಕ ಗಾಣಿಗ ರವಿ ಅವರು ಆ ಹಣ ರೂ.50 ಕೋಟಿಗಲ್ಲಾ, 100 ಕೋಟಿಗಳ ಆಮಿಷ ಒಡ್ಡುತ್ತಿದ್ದಾರೆ. ಈ ಬಗ್ಗೆ ತಮ್ಮಲ್ಲಿ ಆಡಿಯೋ, ವೀಡಿಯೋ, ಪೆನ್ ಡ್ರೈವ್, ಕ್ಯಾಸೆಟ್ ಎಲ್ಲವೂ ಇವೆ ಎಂದು ಹೇಳಿದ್ದಾರೆ. ಇವರ ಹೇಳಿಕೆಯನ್ನು ರಾಜ್ಯದ ಜನ ಇಷ್ಟೊಂದು ಹಣ ಯಾರ ಬಳಿ ಇದೆ ಮತ್ತು ಇದು ಯಾವ ಹಣ ಎಂಬುದರ ಬಗ್ಗೆ ತಿಳಿಯಬೇಕಾಗಿರುತ್ತದೆ. ಅಲ್ಲದೇ, ಅವರ ಬಳಿ ಎಲ್ಲಾ ದಾಖಲೆಗಳೂ ಇವೆ ಎಂದು ಹೇಳಿರುವುದರಿಂದ ಈ ಇಬ್ಬರ ವಿರುದ್ಧ ಸಿ.ಬಿ.ಐ ತನಿಖೆಗೆ ಶಿಫಾರಸ್ಸು ಮಾಡುವಂತೆ ರಾಜ್ಯಪಾಲರಿಗೆ ಜಿಲ್ಲಾ ವಕೀಲರ ಸಂಘದ ಮಾಜಿ ಉಪಾಧ್ಯಕ್ಷ ಮತ್ತು ಕಾನೂನು ಪ್ರಕೋಷ್ಟದ ಸಂಚಾಲಕ ಹೆಚ್.ದಿವಾಕರ್, ರಾಜ್ಯ ಸಮಿತಿ ಸದಸ್ಯ ಎ.ಸಿ. ರಾಘವೇಂದ್ರ, ಸಹ ಸಂಚಾಲಕ ಕೆ.ಹೆಚ್. ಧನಂಜಯ್ ಕೋರಿದ್ದಾರೆ.