ಚಿತ್ರದುರ್ಗ, ನ.18- ಮೆದೆಹಳ್ಳಿ ರಸ್ತೆಯಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ 25ನೇ ವರ್ಷದ 60 ದಿನಗಳ ಬ್ರಹ್ಮೋತ್ಸವವು ನಿನ್ನೆ ಆರಂಭ ಗೊಂಡಿದ್ದು, ಬರುವ ಜನವರಿ 13ರವರೆಗೆ ನಡೆಯ ಲಿದೆ. ಮಾಲಾಧಾರಿಗಳಿಗೆ ದೇವಸ್ಥಾನದಲ್ಲಿ ಪ್ರತಿನಿತ್ಯ ಉಚಿತ ಅನ್ನದಾನ ಕಾರ್ಯಕ್ರಮ ಜರುಗಲಿದೆ.
ಡಿಸೆಂಬರ್ 18ರ ಬುಧವಾರ ಸಂಜೆ 7ಕ್ಕೆ ಮೆಟ್ಟಿಲು ಪೂಜೆ, 22ಕ್ಕೆ ಅಯ್ಯಪ್ಪ ಸ್ವಾಮಿ ದೇವ ಸ್ಥಾನದಲ್ಲಿ ಮಹಾ ಅನ್ನದಾನ ಜರುಗಲಿದೆ.
ಜನವರಿ 13ರ ಸೋಮವಾರ ಸಂಜೆ 6ಕ್ಕೆ ನಗರದಲ್ಲಿ ಅಯ್ಯಪ್ಪ ಸ್ವಾಮಿಯ ಆಭರಣ ಮೆರವಣಿಗೆ ಆಯೋಜಿಸಿದೆ. ಜನವರಿ 14ರಂದು ಮಕರ ಸಂಕ್ರಮಣದ ಅಂಗವಾಗಿ ಸ್ವಾಮಿ ಸನ್ನಿಧಿಯಲ್ಲಿ ಲಕ್ಷ ದೀಪೋತ್ಸವ ನಡೆಯಲಿದೆ.