ಬೆಸ್ಕಾಂ ನಿರ್ಲಕ್ಷ್ಯಕ್ಕೆ ಬಲಿಯಾದ ಇಟ್ಟಿಗೆ ಗ್ರಾಮದ ರೈತ ಸಿದ್ದರಾಮಪ್ಪ

ಚನ್ನಗಿರಿ, ನ.15- ತಾಲ್ಲೂಕಿನ ಇಟ್ಟಿಗೆ ಗ್ರಾಮದ ಎಂ. ಸಿದ್ದರಾಮಪ್ಪ ಎಂಬ ರೈತ ತೋಟಕ್ಕೆ ತೆರಳಿದಾಗ ವಿದ್ಯುತ್‌ ತಂತಿ ತಗುಲಿ ಸಾವಿಗೀಡಾಗಿರುವ ಘಟನೆ ಇಂದು ಮಧ್ಯಾಹ್ನ ಸಂಭವಿಸಿದೆ.

ಇಟಗಿ ಗ್ರಾಮದ ಸಿದ್ದರಾಮಪ್ಪ ಎಂಬುವವರು ತನ್ನ ಅಡಿಕೆ ತೋಟಕ್ಕೆ ತೆರಳಿದ್ದು ಸಂಜೆ ಸುಮಾರು 7 ಗಂಟೆಯಾದರೂ ಮನೆಗೆ ಬಾರದೆ, ಮೊಬೈಲ್‌ ಕರೆಗೂ ಉತ್ತರಿಸದೇ ಇರುವ ಕಾರಣ ಪತ್ನಿ ಶಶಿಕಲಾ ತನ್ನ ಸಂಬಂಧಿಕರೊಂದಿಗೆ ತೋಟಕ್ಕೆ ಹೋಗಿ ನೋಡಿದಾಗ ಪತಿ ವಿದ್ಯುತ್‌ ತಂತಿ ತಗುಲಿ ಬಿದ್ದಿರುವುದು ಕಂಡುಬಂದಿರುತ್ತದೆ. ಕೂಡಲೇ ಚನ್ನಗಿರಿ ಸರ್ಕಾರಿ ಆಸ್ಪತ್ರೆಗೆ ಕರೆೆತಂದರೂ ಸಿದ್ದರಾಮಪ್ಪ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಬೆಸ್ಕಾಂನವರ ದಿವ್ಯ ನಿರ್ಲಕ್ಷಕ್ಕೆ ಮನೆಗೆ ಆಸರೆಯಾಗಿದ್ದ ತನ್ನ ಪತಿ ಸಾವಿಗೀಡಾಗಿರುವುದಾಗಿ ಶಶಿಕಲಾ ಆಕ್ರೋಶ ವ್ಯಕ್ತಪಡಿಸಿದ್ದು, ಮುಂದಿನ ಕಾನೂನು ಕ್ರಮಕ್ಕಾಗಿ ಆರಕ್ಷಕ ನಿರೀಕ್ಷಕರು, ಚನ್ನಗಿರಿ ಪೊಲೀಸ್‌ ಠಾಣೆ ಇವರಲ್ಲಿ ದೂರು ಸಲ್ಲಿಸಿರುತ್ತಾಳೆ.

ಮೃತ ಸಿದ್ದರಾಮಪ್ಪನವರ ಅಂತ್ಯಕ್ರಿಯೆಯನ್ನು ನಾಳೆ ಶನಿವಾರ ಮಧ್ಯಾಹ್ನ 2.30ಕ್ಕೆ ಸ್ವಗ್ರಾಮದಲ್ಲಿ ಮಾಡಲಾಗುವುದು ಎಂದು ಕುಟುಂಬಸ್ಥರು ತಿಳಿಸಿರುತ್ತಾರೆ.

error: Content is protected !!