ಸಿರಿಗೆರೆಯ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಬ್ಯಾಡಗಿ ತಾಲ್ಲೂಕಿನ ಆಣೂರು, ಕೊಲ್ಲಾಪೂರ, ಶಿಡೇನೂರ, ಕೆರವಡಿ, ಹೆಡಿಗ್ಗೊಂಡ, ಹಿರೇನಂದಿಹಳ್ಳಿ ಮತ್ತು ಮಾಸಣಗಿ ಗ್ರಾಮಗಳ ಕೆರೆಗಳಿಗೆ ಇಂದು ಬೆಳಿಗ್ಗೆ 11.30 ಕ್ಕೆ ಬಾಗಿನ ಅರ್ಪಿಸಲಿದ್ದಾರೆ. ಸಂಜೆ 4.30ಕ್ಕೆ ಹಸಿರು ಸೇನೆ ತಾಲ್ಲೂಕು ಘಟಕ ಮಾಸಣಗಿ ಗ್ರಾಮದಲ್ಲಿ ಏರ್ಪಡಿಸಿರುವ ಧರ್ಮ ಸಭೆಯಲ್ಲಿ ಜಗದ್ಗುರುಗಳು ಹಾಗೂ ಶಾಸಕ ಬಸವ ರಾಜ ಶಿವಣ್ಣನವರ, ಸರ್ಕಾರದ ಗ್ಯಾರಂಟಿ ಯೋಜ ನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಶಿವನಗೌಡ ಪಾಟೀಲ, ಮಾಜಿ ಶಾಸಕ ಸುರೇಶ ಪಾಟೀಲ ಇನ್ನಿತರೆ ಮುಖಂಡರು ಪಾಲ್ಗೊಳ್ಳುವರು.
January 22, 2025