ಪಿ.ಜೆ. ಬಡಾವಣೆಯ ಶ್ರೀರಾಮ ದೇವಸ್ಥಾನದ ಮುಂಭಾಗದಲ್ಲಿ ಇಂದು ಸಂಜೆ 6 ಗಂಟೆಗೆ ನಾಗರಿಕರ ಹಿತರಕ್ಷಣ ಸಮಿತಿ ವತಿಯಿಂದ ಪಿಜೆ ಬಡಾವಣೆಯ ವಕ್ಫ್ ಆಸ್ತಿಯ ವಿವಾದ ಹಾಗೂ ಪಿ.ಜೆ. ಬಡಾವಣೆಯ ಕುಂದು ಕೊರತೆ ಸಭೆ ಕರೆಯಲಾಗಿದೆ. ಈ ಸಭೆಯ ಉದ್ಘಾಟನೆಯನ್ನು ಪಾಲಿಕೆಯ ಮಹಾಪೌರ ಕೆ.ಚಮನ್ ಸಾಬ್ ಉದ್ಘಾಟಿಸಲಿದ್ದು, ಉಪ ಮಹಾಪೌರರಾದ ಸೋಗಿ ಶಾಂತ್ ಕುಮಾರ್, ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ, ತಹಶೀಲ್ದರ್ ಡಾ. ಎಂ.ಬಿ. ಅಶ್ವಥ್, ಪಾಲಿಕೆಯ ಉಪ ಆಯುಕ್ತರಾದ ಎಸ್.ಲಕ್ಷ್ಮಿ ಅವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸು ವರು. ಸಮಾರಂಭದ ಅಧ್ಯಕ್ಷತೆ ವಾರ್ಡ್ ಅಧ್ಯಕ್ಷ ಮಧು ಪವಾರ್ ವಹಿಸಿಕೊಳ್ಳಲಿದ್ದಾರೆ.
December 23, 2024