ದಾವಣಗೆರೆ, ನ.16- ಕಳಪೆ ಗುಣಮಟ್ಟದ ಟಾರ್ಪಾಲ್ ಪೂರೈಕೆ ಮಾಡಿರುವ ತಯಾರಿಕಾ ಸಂಸ್ಥೆ ಹಾಗೂ ಮಾರಾಟಗಾರರಿಗೆ ಬಿಲ್ ಮೊತ್ತದೊಂದಿಗೆ ಬಡ್ಡಿ ಸಮೇತ ಪರಿಹಾರ ನೀಡಲು ಗ್ರಾಹಕರ ಆಯೋಗ ಆದೇಶ ನೀಡಿದೆ.
ತಾಲ್ಲೂಕಿನ ಆಲೂರು ಗ್ರಾಮದ ರೈತ ನಟರಾಜ್ ಎಂಬುವರು ಮುಂಬೈ ಮೂಲದ ಸಂಸ್ಥೆಯ ದಾವಣಗೆರೆ ಮಾರಾಟಗಾರರಿಂದ 2023ರ ಮೇ 26 ರಂದು ರೂ. 1,00,027 ಮೌಲ್ಯದ ಟಾರ್ಪಾಲ್ ಖರೀದಿಸಿದ್ದರು.
ಕೃಷಿ ಹೊಂಡದಲ್ಲಿ ಸಂಗ್ರಹಿಸಿದ ನೀರು ಟಾರ್ಪಾಲಿನ ಕಳಪೆ ಗುಣ ಮಟ್ಟದಿಂದ ಸೋರಿ ಹೋಗುತ್ತಿರುವುದರಿಂದ ಪರಿಹಾರ ಕೋರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮೊರೆ ಹೋಗಿದ್ದರು.
ಮುಂಬೈ ಮೂಲದ ಹಿಪೋ ಟೆಕ್ ಟೆಕ್ಸ್ಮ್ ಕೋ ಹೌಸ್ ಮೂಲದ ತಯಾರಿಕಾ ಸಂಸ್ಥೆ ವಿರುದ್ದ ರೂ.20,000 ಮಾನಸಿಕ ಕಿರುಕುಳ ಹಾಗೂ ದೂರು ದಾಖಲಿಸಲು ಖರ್ಚು ಮಾಡಿದ ಮೊತ್ತ ರೂ.5,000 ಗಳನ್ನು ಪಾವತಿಸುವಂತೆ ದೂರನ್ನು ದಾಖಲಿಸಿದ್ದರು.
ರೈತರಿಗೆ ಹಣಕಾಸಿನ ಮತ್ತು ಮಾನಸಿಕ ತೊಂದರೆಯನ್ನು ಉಂಟು ಮಾಡಿದ್ದರಿಂದ ಸ್ಥಾನಿಕ ಮಾರಾಟಗಾರರು ಮತ್ತು ತಯಾರಕರು ಜಂಟಿಯಾಗಿ. ಟಾರ್ಪಾಲ್ ಮೊತ್ತ ರೂ.1,00,027/-ಗಳಿಗೆ ಶೇ 18%ರ ಬಡ್ಡಿಯೊಂದಿಗೆ ಖರೀದಿಸಿದ ದಿನಾಂಕದಿಂದ 3 ತಿಂಗಳ ಒಳಗಾಗಿ ಪಾವತಿಸುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಮಹಂತೇಶ ಈರಪ್ಪ ಶಿಗ್ಲಿ, ಸದಸ್ಯರಾದ ತ್ಯಾಗರಾಜನ್ ಮತ್ತು ಶ್ರೀಮತಿ ಬಿ.ಯು. ಗೀತಾ ಆದೇಶಿಸಿರುತ್ತಾರೆ.