ನಗರದಲ್ಲಿ ಇಂದು ಮಧುಮೇಹ ತಪಾಸಣೆ ಶಿಬಿರ, ಸ್ವಾಸ್ಥ್ಯ ಮೇಳ

ಬಾಪೂಜಿ ಆಸ್ಪತ್ರೆ ಹೊರ ರೋಗಿಗಳ ವಿಭಾಗ ಹಾಗೂ ಎಸ್‌.ಎಸ್. ಹೈಟೆಕ್ ಆಸ್ಪತ್ರೆಯ ಆಡಳಿತ ಮಂಡಳಿ ವಿಭಾಗದಲ್ಲಿ ಇಂದಿನಿಂದ ಇದೇ ದಿನಾಂಕ 20 ರವರೆಗೆ ಪ್ರತಿ ದಿನ ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ಎಸ್.ಎಸ್.ಕೇರ್ ಟ್ರಸ್ಟ್ ವತಿಯಿಂದ ವಿಶ್ವ ಮಧುಮೇಹ ದಿನಾಚರಣೆ ಅಂಗವಾಗಿ ಸ್ವಾಸ್ಥ್ಯ ಮೇಳ ಮತ್ತು ಸಕ್ಕರೆ ಕಾಯಿಲೆ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಎಸ್.ಎಸ್. ಕೇರ್ ಟ್ರಸ್ಟ್  ಕೋರ್ ಕಮಿಟಿ ಸದಸ್ಯ ಡಾ.ಮೂಗನಗೌಡ ತಿಳಿಸಿದ್ದಾರೆ.

ಇಂದು ಬೆಳಿಗ್ಗೆ 9 ಕ್ಕೆ ಜೆಜೆಎಂ ಮೆಡಿಕಲ್ ಕಾಲೇಜಿನಿಂದ `ವಾಕಥಾನ್’ ನಡೆಯಲಿದೆ. ನಂತರ ಬೆಳಿಗ್ಗೆ 10.30 ರಿಂದ ಮಧುಮೇಹ ಮತ್ತು ಸ್ವಾಸ್ಥ್ಯ ಮೇಳ ನಡೆಯಲಿದೆ. ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಿಬಿರದಲ್ಲಿ ರಕ್ತ ಪರೀಕ್ಷೆ, ಇಸಿಜಿ, ಬಿಪಿ ಪರೀಕ್ಷೆ, ಕಿಡ್ನಿ ರೋಗ ತಜ್ಞರೊಂದಿಗೆ ಸಮಾಲೋಚನೆ, ಮಧುಮೇಹ ಚಿಕಿತ್ಸೆ ಸಮಾಲೋಚನೆ, ಇನ್ಸುಲಿನ್ ಪೆನ್ ಬಳಕೆಯ ತಿಳಿವಳಿಕೆ ನೀಡುವುದು ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.

error: Content is protected !!