ದಾವಣಗೆರೆ, ನ. 13- ಫೋರಮ್ ಆಫ್ ಪ್ರಾಕ್ಟೀಸಿಂಗ್ ಆರ್ಕಿಟೆಕ್ಟ್ ಮತ್ತು ಸಿವಿಲ್ ಇಂಜಿನಿಯರ್ಸ್ ಮತ್ತು ಯುಎಸ್ ಕಮ್ಯೂನಿಕೇಷನ್ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಕಟ್ಟಡ ಸಾಮಗ್ರಿಗಳ ಇಂಟೀರಿಯರ್ಸ್, ಎಕ್ಸ್‌ಟೀರಿಯರ್ಸ್ ಮತ್ತು ಫರ್ನೀಚರ್ಸ್ ಬೃಹತ್ ವಸ್ತು ಪ್ರದರ್ಶನವನ್ನು ನಾಡಿದ್ದು ದಿನಾಂಕ 15 ರಿಂದ 17 ರವರೆಗೆ ಒಟ್ಟು ಮೂರು ದಿನಗಳ ಕಾಲ ನಗರದ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ಆಯೋಜಿಸಲಾಗಿದೆ.
ಸುಂದರ ಸದೃಢ ನವ ನವೀನ ವಿನ್ಯಾಸ ಹೊಂದಿರುವ ಕಟ್ಟಡಗಳನ್ನು ನಿರ್ಮಿಸುವ ಮಹತ್ವಾಕಾಂಕ್ಷೆಯನ್ನು ಹೊಂದಿ ಕಳೆದ 25 ವರ್ಷಗಳಿಂದ ಬಿಲ್ಡ್ ಮ್ಯಾಟ್ ಎಂಬ ವಸ್ತು ಪ್ರದರ್ಶನವನ್ನು ಆಯೋಜಿಸುತ್ತಾ ಬಂದಿದೆ.
ಅತ್ಯಂತ ಉತ್ಕೃಷ್ಟ ಮಟ್ಟದ ಉತ್ಪಾದಕರಿಂದ ನೇರವಾಗಿ ಗ್ರಾಹಕರಿಗೆ ಸರಳ ಮತ್ತು ಸುಲಭವಾಗಿ ಕೈಗೆಟಕುವಂತೆ ಕಟ್ಟಡ ಸಾಮಗ್ರಿಗಳನ್ನು ಒಂದೇ ಸೂರಿನಡಿಯಲ್ಲಿ ಒಪ್ಪವಾಗಿ ಜೋಡಿಸಿರುವ ಅತ್ಯಂತ ವಿಶಿಷ್ಟ ರೀತಿಯ ತಾಂತ್ರಿಕ ವಸ್ತು ಪ್ರದರ್ಶನ ಬಿಲ್ಡ್ ಮ್ಯಾಟ್ 2024 ಕಟ್ಟಡ ಸಾಮಗ್ರಿಗಳ ಬಗ್ಗೆ ಗೊಂದಲ ಹೊಂದಿರುವ ಮನೆ ಕಟ್ಟುವವರು, ಹೊಸತನ ಬಯಸುವವರು ಈ ಪ್ರದರ್ಶನದಲ್ಲಿ ಭಾಗಿಯಾಗಿ ತಮಗಿರುವ ಸಮಸ್ಯೆಗಳನ್ನು ಇಲ್ಲಿ ಬಗೆಹರಿಸಿಕೊಳ್ಳಬಹುದು.
ಸಿಮೆಂಟ್, ಸ್ಟೀಲ್, ಪ್ಲೈವುಡ್,ಸೇಫ್ಟಿ ಎಕ್ವಿಪ್ಟೆಂಟ್ಸ್ ಸ್ಟೋರೀಸ್, ರೂಫಿಂಗ್, ಕನೆಕ್ಷನ್ ಕೆಮಿಕಲ್ಸ್, ಸೋಲಾರ್ ಪ್ರಾಡಕ್ಟ್ ಮಷಿನರಿ ಅಂಡ್ ಇಕ್ವಿಪ್ಟೆಂಟ್ಸ್, ಫರ್ನಿಚರ್ಸ್, ಇಂಟೀರಿಯರ್ಸ್ ಅಂಡ್ ಎಕ್ಟೇರಿಯ ಪ್ರಾಡಕ್ಟ್ ಹೋಂ ಲೋನ್ ಮತ್ತು ಅಲೈಡ್ ಪ್ರಾಡಕ್ಟ್, ಡೋರ್ಸ್ ವಿಂಡೋಸ್ ಅಂಡ್ ಬಾರ್ ಫಿಟ್ಟಿಂಗ್ಸ್, ಟೈಲ್ಸ್ ಅಂಡ್ ಪ್ಲಂಬಿಂಗ್, ಕನಸ್ಟ್ರಕ್ಷನ್ ಟೆಕ್ನಾಲಜೀಸ್, ಸ್ವಿಚ್ ಸೆಂಡ್ ಎಲೆಕ್ನಿಕಲ್ ಫಿಟ್ಟಿಂಗ್ಸ್ ಮುಂತಾದ ಹತ್ತು ಹಲವು ಉತ್ಪನ್ನಗಳನ್ನು ಒಂದೇ ಸೂರಿನಡಿಯಲ್ಲಿ ನೋಡಿ ವಿಚಾರಿಸಿ, ಸಮಾಲೋಚಿಸಬಹುದಾಗಿದೆ.
ಬಿಲ್ಡ್ ಮ್ಯಾಟ್ 2024 ವಸ್ತು ಪ್ರದರ್ಶನ ಕಾರ್ಯಕ್ರಮದ ಪ್ರಾಯೋಜಕರು ಪ್ರತಿಷ್ಠಿತ ಉದ್ದಿಮೆದಾರರಾದ ಬಿಎಂಎಸ್ ಬ್ಯೂಟಿಫುಲ್ ಹೋಂ ಸರ್ವೀಸ್ ವಿಥ್ ಏಶಿಯನ್ ಪೇಂಟ್ಸ್ ಮತ್ತು ಶ್ರೀದೇವಿ ಟೈಲ್ಸ್ ಸ್ಟೋನ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಆದಿತ್ಯ ವಿಂಡೋಸ್ ಸಪೋರ್ಟಿಂಗ್ ಆರ್ಗನೈಜೇಷನ್ಸ್ ಅಸೋಸಿಯೇಷನ್ ಆಫ್ ಕನ್ಸ್‌ಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ (ಇಂಡಿಯಾ) ದಾವಣಗೆರೆ ಮತ್ತು ಇನ್ಯಾಕ್ಸ್ ಮತ್ತು ಇಂಡಿಯನ್ ಕಾಂಕ್ರೀಟ್ ಇನ್ಸ್‌ಸ್ಟಿಟ್ಯೂಟ್ ದಾವಣಗೆರೆ ಸೆಂಟರ್ ಮತ್ತು ಯೂ ಎಸ್ ಕಮ್ಯುನಿಕೇಷನ್ಸ್ ಬೆಂಗಳೂರು.