ಲಯನ್ಸ್ ಕ್ಲಬ್ ಸಾಮಾನ್ಯ ಸಭೆ, ಉಪನ್ಯಾಸ, ಪ್ರಶಸ್ತಿ ಫಲಕ ವಿತರಣೆ, ಲಯನ್ಸ್ ಸ್ಟಿಕರ್ ಹಾಗೂ ಬ್ಯಾಡ್ಜ್ ವಿತರಣಾ ಕಾರ್ಯಕ್ರಮವು ಲಯನ್ಸ್ ಭವನದಲ್ಲಿ ಇಂದು ಸಂಜೆ 7.05ಕ್ಕೆ ನಡೆಯಲಿದೆ. ಲಯನ್ಸ್ ಕ್ಲಬ್ ಅಧ್ಯಕ್ಷ ಎಸ್.ಜಿ. ಉಳವಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯರ ಆರೋಗ್ಯ, ತಾಳ್ಮೆ, ಉತ್ಸಾಹ ಕುರಿತು ಹಿರಿಯ ಲಯನ್ಸ್ ಸದಸ್ಯ ಟಿ.ಎಂ. ಪಂಚಾಕ್ಷರಯ್ಯ ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದು ಕಾರ್ಯದರ್ಶಿ ಸಿ. ಅಜಯ್ ನಾರಾಯಣ್ ತಿಳಿಸಿದ್ದಾರೆ.
January 23, 2025