ದಾವಣಗೆರೆ, ನ.11- ಯಾವುದೋ ಕಾಯಿಲೆಯಿಂದ ನಗರದ ಸಿ.ಜಿ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸುಮಾರು 40 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿ ಅಕ್ಟೋಬರ್ 31 ರಂದು ಮೃತಪಟ್ಟಿದ್ದಾನೆ.
ಈ ವ್ಯಕ್ತಿ ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು, ಬಿಳಿಕೂದಲು ಮತ್ತು ಕಪ್ಪು ಬಿಳಿ ಕುರುಚಲು ಗಡ್ಡ ಹೊಂದಿರುತ್ತಾನೆ. ಮೈ ಮೇಲೆ ಕಪ್ಪು ಬಣ್ಣದ ಜರ್ಕಿನ್, ನೀಲಿ ಮತ್ತು ಬಿಳಿ ಚುಕ್ಕೆ ಇರುವ ತುಂಬು ತೋಳಿನ ಶರ್ಟ್ ಮತ್ತು ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾರೆ. ಸಂಬಂಧಪಟ್ಟವರು ಹೆಚ್ಚಿನ ಮಾಹಿತಿಗಾಗಿ ಬಡಾವಣೆ ಪೆೊಲೀಸ್ ಠಾಣೆ (ದೂರವಾಣಿ 08192-272012, 259213) ಯನ್ನು ಸಂಪರ್ಕಿಸಬಹುದು.