ನಗರದ ಪಿ.ಜೆ. ಬಡಾವಣೆ ಆಸ್ತಿಯ ಪಹಣಿಗಳಲ್ಲಿ ವಕ್ಫ್‌ ಸಂಸ್ಥೆ ಹೆಸರು

ಸ್ಥಳೀಯರಲ್ಲಿ ಆತಂಕ

ದಾವಣಗೆರೆ, ನ.8- ರೈತರ ಜಮೀನು, ಮಠ, ಮಂದಿರಗಳು ವಕ್ಫ್‌ಗೆ ಸೇರಿರುವ ಕುರಿತು ನೋಟೀಸುಗಳು ಬಂದ ಸುದ್ದಿಗಳ ನಂತರ ಇದೀಗ ನಗರದ ಪ್ರತಿಷ್ಠಿತ ಬಡಾವಣೆಯೂ ವಕ್ಫ್‌ಗೆ ಸೇರಿದ ಬಗ್ಗೆ ಪಹಣಿಯಲ್ಲಿ ನಮೂದಾಗಿದೆ. ನಗರದ ಪಿ.ಜೆ. ಬಡಾವಣೆಯ ಎವಿಕೆ ಕಾಲೇಜು ಬಳಿಯ ಸರ್ವೇ ನಂಬರ್ 53ವುಳ್ಳ 4 ಎಕರೆ 13 ಗುಂಟೆ ಪ್ರದೇಶ ಅಂದರೆ ಒಂದು ಏರಿಯಾ ಪೂರ್ಣ ವಕ್ಫ್‌ಗೆ ಸೇರಿದ ಬಗ್ಗೆ ಪಹಣಿಯಲ್ಲಿ ನಮೂದಾಗಿದೆ. ಈ ಪ್ರದೇಶ 1993ರಲ್ಲಿ ಖಾಸಗಿ ಬಡಾವಣೆಯಾಗಿತ್ತು. 2015ರಲ್ಲಿ ಮ್ಯುಟೇಷನ್ ರಿಜಿಸ್ಟರ್ ಆಗಿತ್ತು. ಈ ವೇಳೆ ಎಂ.ಆರ್. ನಂಬರ್ ಅದಲು ಬದಲು ಮಾಡಿ ಆದೇಶಿಸಲಾಗಿತ್ತು ಎನ್ನಲಾಗಿದೆ. 9 ವರ್ಷದ ಹಿಂದೆ ಪಹಣಿಯಲ್ಲಿ ವಕ್ಫ್‌ ಹೆಸರು ಸೇರಿಸಲಾಗಿದ್ದು, ಇದೀಗ ಖಬರಸ್ಥಾನ ಸುನ್ನಿ ವಕ್ಫ್‌ ಸಂಸ್ಥೆ ಎಂದು ಪಹಣಿಯಲ್ಲಿ ನಮೂದಾಗಿದೆ. ಸಾಕಷ್ಟು ವರ್ಷಗಳಿಂದ ಜೀವನ ನಡೆಸುತ್ತಿರುವ ಅಲ್ಲಿನ ನಾಕರಿಕರಿಗೆ ಈಗ  ಆತಂಕ ಶುರುವಾಗಿದೆ.

error: Content is protected !!