ಮಹಾನಗರ ಪಾಲಿಕೆಯಿಂದ 13 ರಿಂದ ಇ-ಆಸ್ತಿ ಆಂದೋಲನ

ದಾವಣಗೆರೆ, ನ.8- ಮಹಾನಗರಪಾಲಿಕೆ ವತಿಯಿಂದ ಏಕಗವಾಕ್ಷಿಯಡಿ ಇ-ಆಸ್ತಿ ವಿಶೇಷ ಆಂದೋಲನವನ್ನು ನವಂಬರ್ 13 ರಿಂದ ಡಿಸೆಂಬರ್ 31 ರವರೆಗೆ  ಮಹಾನಗರಪಾಲಿಕೆಯ 3 ವಲಯ ಕಚೇರಿಗಳಲ್ಲಿ ಹಮ್ಮಿಕೊಳ್ಳಲಾಗಿದೆ.

ಸಾರ್ವಜನಿಕರು ತಮ್ಮ ಆಸ್ತಿಗೆ ಸಂಬಂಧಿಸಿದ ಎಲ್ಲಾ ದಾಖಲಾತಿಗಳನ್ನು ಈ ಆಂದೋಲನದಲ್ಲಿ ಕಡ್ಡಾಯವಾಗಿ ಸಲ್ಲಿಸಿ, ತ್ವರಿತವಾಗಿ ಇ-ಆಸ್ತಿ (ನಮೂನೆ-2) ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಇ-ಆಸ್ತಿ ಪಡೆಯಲು ಸಲ್ಲಿಸಬೇಕಾದ ದಾಖಲೆಗಳು: ಸ್ವತ್ತಿನ ಮಾಲೀಕತ್ವದ ದಾಖಲೆಗಳು ಕ್ರಯ, ದಾನ, ಪಾಲುವಿಭಾಗ ಹಾಗೂ ಇತರೆ ನೊಂದಣಿ ದಾಖಲೆಗಳು,  ಸ್ವತ್ತಿನ ಮಾಲೀಕರ ಪಾಸ್ ಪೋರ್ಟ್ ಅಳತೆಯ ಭಾವಚಿತ್ರ, ಸ್ವತ್ತಿನ ಛಾಯಾಚಿತ್ರ,  ಮಾಲೀಕರ ಗುರುತಿನ ದಾಖಲೆ ಮತದಾರರ ಗುರುತಿನ ಚೀಟಿ, ಪ್ಯಾನ್ ಕಾರ್ಡ್, ಸಕ್ಷಮ ಪ್ರಾಧಿಕಾರದಿಂದ ಪಡೆದ ಬಡಾವಣೆ ಅನುಮೋದನೆ ಪತ್ರ ಹಾಗೂ ನಕ್ಷೆ, ಕಟ್ಟಡ ಪರವಾನಿಗೆ ಪಡೆದ ದಾಖಲೆ, 2001-02ನೇ ಸಾಲಿನಿಂದ 2024-25ನೇ ಸಾಲಿನವರೆಗೆ ಆಸ್ತಿ ತೆರಿಗೆ ಪಾವತಿಸಿದ ದಾಖಲೆಗಳು ಹಾಗೂ ನೀರಿನ ಶುಲ್ಕ, ಒಳಚರಂಡಿ, ಘನತ್ಯಾಜ್ಯ ಸೇವಾ ಶುಲ್ಕ ಪಾವತಿಸಿದ ದಾಖಲೆಗಳು.

ವಲಯ ಕಚೇರಿಗಳ ವಿವರ ಹಾಗೂ ಸಂಪರ್ಕಿಸಬೇಕಾದ ವಿವರ : ವಲಯ ಕಛೇರಿ-1, ರಾಜೀವ್ ಗಾಂಧಿ ಬಡಾವಣೆ ದಾವಣಗೆರೆಯ ವಲಯದ ಆಯುಕ್ತರಾದ ನಾಗರತ್ನಮ್ಮ ಮೊ.ಸಂ:7349048992, ಸಂಪರ್ಕಿಸಬೇಕಾದ ಅಧಿಕಾರಿ ಕಚೇರಿ ವ್ಯವಸ್ಥಾಪಕರಾದ ಗೋವಿಂದ ನಾಯ್ಕ ಮೊ.ಸಂ:9611105139, ವಲಯ ಕಚೇರಿ-2, ಟಿವಿ ಸ್ಟೇಷನ್ ಮುಂಭಾಗ, ಲೋಕಿಕೆರೆ ರಸ್ತೆ ದಾವಣಗೆರೆಯ ವಲಯ ಆಯುಕ್ತರಾದ ಇಸ್ಮಾಯಿಲ್ ಮೊ.ಸಂ:9844367555, ಸಂಪರ್ಕಿಸಬೇಕಾದ ಅಧಿಕಾರಿ ಕಮಿಟಿ ಸೆಕ್ರಟರಿ ಸರಳಾ ಮೊ.ಸಂ: 9901124232, ವಲಯ ಕಚೇರಿ-3, ಆಶ್ರಯ ಆಸ್ಪತ್ರೆ ಪಕ್ಕ ಎಂ.ಸಿ.ಸಿ ಎ. ಬ್ಲಾಕ್ ದಾವಣಗೆರೆ ವಲಯ ಆಯುಕ್ತರಾದ ಈರಮ್ಮ ಮೊ.ಸಂ: 9901768584, ಸಂಪರ್ಕಿಸಬೇಕಾದ ಕಚೇರಿ ವ್ಯವಸ್ಥಾಪಕರಾದ ತ್ರಿನೇತ್ರ ಮೊ.ಸಂ: 8971454920 ನ್ನು ಸಂಪರ್ಕಿಸಲು ಆಯುಕ್ತರಾದ ರೇಣುಕಾ ತಿಳಿಸಿದ್ದಾರೆ.

error: Content is protected !!