ದಾವಣಗೆರೆ, ನ.8- ಪ್ರಸಕ್ತ ಸಾಲಿನ ಆರ್ಥಿಕ ವರ್ಷವು ಮಾರ್ಚ್-2025ಕ್ಕೆ ಮುಕ್ತಾಯವಾಗ ಲಿದ್ದು, ಮಹಾ ನಗರಪಾಲಿಕೆಯಿಂದ ಆಸ್ತಿ ತೆರಿಗೆ, ನೀರಿನ ದರ, ಒಳಚರಂಡಿ ಸೇವಾ ಶುಲ್ಕಗಳನ್ನು ಪಾವತಿಸಿಕೊಳ್ಳುವುದಕ್ಕಾಗಿ ಪ್ರತಿ ವಾರ್ಡ್‍ಗಳಿಗೆ ಅಧಿಕಾರಿ, ಸಿಬ್ಬಂದಿಗಳ ತಂಡವನ್ನು ರಚಿಸಲಾಗಿದೆ.
ಈ ಅಧಿಕಾರಿ, ಸಿಬ್ಬಂದಿಗಳು ತಮ್ಮ ಸ್ವತ್ತಿಗೆ ಭೇಟಿ ನೀಡಿದಾಗ ಬಾಕಿಯಿರುವ ತೆರಿಗೆಯ ಶುಲ್ಕಗಳನ್ನು ಪಾವತಿಸಬೇಕು. ತೆರಿಗೆ ಬಾಕಿಯಿದ್ದಲ್ಲಿ, ಬಾಕಿಯಿರುವ ಮಾಹೆಯಿಂದ ಪ್ರತಿ ಮಾಹೆಗೆ ಶೇ.2 ರಷ್ಟು ದಂಡ ವಿಧಿಸಲಾಗುವುದೆಂದು ಪಾಲಿಕೆ ಆಯುಕ್ತರಾದ ರೇಣುಕಾ ತಿಳಿಸಿದ್ದಾರೆ.