ವಿದ್ಯಾನಗರ ವಿನಾಯಕ ಬಡಾವಣೆಯ ದಾವಣಗೆರೆ ಕ್ರೀಡಾ ಮತ್ತು ಮನೋರಂಜನಾ ಕೇಂದ್ರ, ಎಸ್.ಎಸ್. ಕೇರ್ ಟ್ರಸ್ಟ್, ಎಸ್.ಎಸ್. ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರ, ಕಾಲೇಜ್ ಆಫ್ ಡೆಂಟಲ್ ಸೈನ್ಸ್, ಎಸ್.ಎಸ್. ನಾರಾಯಣ ಸೂಪರ್ ಸ್ಪೆಷಾಲಿಟಿ ಸೆಂಟರ್ ಇವರ ಸಂಯುಕ್ತಾಶ್ರಯದಲ್ಲಿ ಇಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ ವಿದ್ಯಾನಗರ ವಿನಾಯಕ ಬಡಾವಣೆ 3 ನೇ ಕ್ರಾಸ್‌ನಲ್ಲಿರುವ ಕ್ರೀಡಾ ಮತ್ತು ಮನೋರಂಜನಾ ಕೇಂದ್ರದ ಆವರಣದಲ್ಲಿ ಉಚಿತ ಸಮಾಲೋಚನೆ ಹಾಗೂ ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸಲಾಗಿದೆ. ವಿವರಕ್ಕೆ ಸಂಪರ್ಕಿಸಿ : 9880107630.
December 22, 2024