ಅಖಿಲ ಭಾರತ ದಲಿತ ಆಂದೋಲನದ ಪ್ರಥಮ ಕರ್ನಾಟಕ ರಾಜ್ಯ ಸಮ್ಮೇಳನವು ಇಂದು ನಗರದಲ್ಲಿ ನಡೆಯಲಿದೆ ಎಂದು ಸಮ್ಮೇಳನದ ಸಿದ್ಧತಾ ಸಮಿತಿ ಅಧ್ಯಕ್ಷ ಕಾಂ. ಆವರಗೆರೆ ಚಂದ್ರು ತಿಳಿಸಿದ್ದಾರೆ.
ಬೆಳಿಗ್ಗೆ 11.45ಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಲ್‌ನಿಂದ ರಾಲಿ ಆರಂಭವಾಗಿ ಅಶೋಕ ರಸ್ತೆ, ಗಾಂಧಿ ಸರ್ಕಲ್, ಪಿಬಿ ರಸ್ತೆ, ಐಬಿ ರಸ್ತೆ ಮೂಲಕ ಸಾಗಿ ಪುನಃ ಜಯದೇವ ಸರ್ಕಲ್‌ಗೆ ಆಗಮಿಸಿ ಅಂತ್ಯಗೊಳ್ಳುವುದು.
ನಂತರ ಜಯದೇವ ಸರ್ಕಲ್ ಹತ್ತಿರದ ನಾಟ್ಯಾಚಾರ್ಯ ಕುಲಕರ್ಣಿ ರಸ್ತೆಯಲ್ಲಿ ಬಹಿರಂಗ ಸಭೆ ನಡೆಯುವುದು.
ಬಹಿರಂಗ ಸಭೆಯಲ್ಲಿ ಕಾಂ. ಎ. ರಾಮಮೂರ್ತಿ, ಡಾ. ಸದಾಶಿವ ಮರ್ಜಿ, ಎಸ್.ಎಸ್. ಮಲ್ಲಿಕಾರ್ಜುನ್, ಡಾ. ಪ್ರಭಾ ಮಲ್ಲಿಕಾರ್ಜುನ್, ಡಾ. ಸಿದ್ದನಗೌಡ ಪಾಟೀಲ, ಡಾ. ಮಹೇಶ್ ಕುಮಾರ ರಾಥೋಡ್, ಕೆ.ಎಸ್. ಬಸವರಾಜ್, ಕಾಂ. ಆವರಗೆರೆ ಚಂದ್ರು, ಕಾಂ. ಹೆಚ್.ಜಿ. ಉಮೇಶ್, ಕಾಂ. ರೇಣುಕಮ್ಮ, ಕಾಂ. ಹೆಚ್.ಎಂ. ಸಂತೋಷ್, ಕಾಂ. ಷಣ್ಮುಖ ಸ್ವಾಮಿ, ಕಾಂ. ಹೊನ್ನಪ್ಪ ಮರೆಮ್ಮನವರ ಸೇರಿದಂತೆ ಇತರರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಬಹಿರಂಗ ಸಭೆ ಮುಕ್ತಾಯದ ನಂತರ ಸಂಜೆ ಹರಿಹರದ ಕೃಷ್ಣಪ್ಪ ಭವನದಲ್ಲಿ ಪ್ರತಿನಿಧಿಗಳ ಸಮಾವೇಶ ಆರಂಭವಾಗಿ ಮಾರನೇ ದಿನ ಸಂಜೆವರೆಗೂ ಮುಂದುವರೆದು ನಂತರ ರಾಜ್ಯ ಸಮಿತಿ ಪದಾಧಿಕಾರಿಗಳ ಆಯ್ಕೆಯೊಂದಿಗೆ ಸಮ್ಮೇಳನ ಮುಕ್ತಾಯವಾಗುವುದು.