ನಗರದಲ್ಲಿ ನಾಳೆ ನೀನಾಸಂ ತಿರುಗಾಟ ನಾಟಕಗಳ ಪ್ರದರ್ಶನ

ದಾವಣಗೆರೆ, ನ.8-  ನಗರದ ಒಡನಾಟ ರಂಗ ತಂಡ, ಸಿದ್ದಗಂಗಾ ವಿದ್ಯಾಸಂಸ್ಥೆ, ಇನ್ಸೈಟ್ ಐಎಎಸ್, ಕೆಎಎಸ್ ಕೋಚಿಂಗ್ ಇನ್ ಸ್ಟಿಟ್ಯೂಟ್ ಸಹಯೋಗದೊಂದಿಗೆ ಸಿದ್ದಗಂಗಾ ವಿದ್ಯಾ ಸಂಸ್ಥೆ ಆವರಣದಲ್ಲಿ ನಾಡಿದ್ದು ದಿನಾಂಕ 10  ಮತ್ತು 11ರಂದು ನೀನಾಸಂ ತಿರುಗಾಟ 2024 ನಾಟಕಗಳ ಪ್ರದರ್ಶನಗಳನ್ನು  ಏರ್ಪಡಿಸಲಾಗಿದೆ.

ನಾಡಿದ್ದು ದಿನಾಂಕ 10 ರ ಭಾನುವಾರ  ಸಂಜೆ 7 ಗಂಟೆಗೆ ಮರಾಠಿ ನಾಟಕಕಾರ ಅಭಿರಾಮ್ ಭಡ್ಕಮ್ಕರ್ ಇವರ ಮರಾಠಿ ನಾಟಕವನ್ನು ಜಯಂತ ಕಾಯ್ಕಿಣಿ ಕನ್ನಡಕ್ಕೆ ಅನುವಾದಿಸಿದ ಅಂಕದ ಪರದೆ ನಾಟಕವು ವಿದ್ಯಾನಿಧಿ ವನಾರಸೇ ಪ್ರಸಾದ್ ನಿರ್ದೇಶನದಲ್ಲಿ ಪ್ರದರ್ಶನವಾಗಲಿದೆ.

ಇದೇ ದಿನಾಂಕ 11 ರಂದು ಸಂಜೆ ಏಳು ಗಂಟೆಗೆ ಸಂಸ್ಕೃತ ನಾಟಕಕಾರ ಭವಭೂತಿ ರಚಿಸಿದ ವಿದ್ಯಾಹೆಗಡೆ, ಭಾರ್ಗವ ಕೆಎನ್, ಎಮ್.ಎಚ್.ಗಣೇಶ ಸಂಗೀತ ವಿನ್ಯಾಸ ಹಾಗೂ ಹಿರಿಯ ರಂಗನಿರ್ದೇಶಕ ಕೆ ವಿ ಅಕ್ಷರ ಇವರ ಕನ್ನಡ ರೂಪ ಮತ್ತು ನಿರ್ದೇಶನದಲ್ಲಿ ಸಂಸ್ಕೃತ ನಾಟಕ ಮಾಲತಿ ಮಾಧವ ನಾಟಕ ಪ್ರದರ್ಶನಗೊಳ್ಳಲಿದೆ.

ನೀನಾಸಂ ತಿರುಗಾಟದ ನಾಟಕಗಳು ಉಚಿತ ಪ್ರವೇಶವಿದ್ದು, ರಂಗಾಸಕ್ತರು ಭಾಗವಹಿಸಿ, ಯಶಸ್ವಿಗೊಳಿಸಬೇಕು ಎಂದು ಒಡನಾಟ ರಂಗ ತಂಡದ ಮುಖ್ಯಸ್ಥ ಎನ್.ವಿ.ಶ್ರೀಕಾಂತ್ ತಿಳಿಸಿದ್ದಾರೆ.

error: Content is protected !!