ಹರಿಹರ : ಇಂದು ಸಹಸ್ರಾರ್ಜುನ ಮಹಾರಾಜರ ಜಯಂತ್ಯೋತ್ಸವ

ಎಸ್‌.ಎಸ್.ಕೆ. ಸಮಾಜದ ವತಿಯಿಂದ ಶ್ರೀ ಸಹಸ್ರಾರ್ಜುನ ಮಹಾರಾಜರ ಜಯಂತಿ ಯನ್ನು ಇಂದು ಆಚರಣೆ ಮಾಡಲಾಗುವುದು ಎಂದು ಎಸ್.ಎಸ್.ಕೆ. ಸಮಾಜದ ಅಧ್ಯಕ್ಷ ಎನ್. ಮೋಹನ್ ಖಿರೋಜಿ ತಿಳಿಸಿದ್ದಾರೆ.

ಇಂದು ಬೆಳಿಗ್ಗೆ 8 ಗಂಟೆಗೆ ಶ್ರೀ ಸಹಸ್ರಾರ್ಜುನ ವೃತ್ತದಲ್ಲಿ  ಶ್ರೀ ಸಹಸ್ರಾರ್ಜುನ ಮಹಾ ರಾಜರ ಭಾವ ಚಿತ್ರಕ್ಕೆ ಪುಷ್ಪ ನಮನ, ಬೆಳಗ್ಗೆ 9 ಗಂಟೆಗೆ ಎಸ್‌.ಎಸ್.ಕೆ. ಯುವ ಗಜಪಡೆ ಇವರಿಂದ ಶ್ರೀಮತಿ ಯಲ್ಲಮ್ಮ   ಭೂತೆ ಸಮುದಾಯ ಭವನದಲ್ಲಿ ಶ್ರೀ ಸಹಸ್ರಾರ್ಜುನ ಮಹಾರಾಜರ ಧ್ವಜಾರೋಹಣ, ಬೆಳಿಗ್ಗೆ 10 ಗಂಟೆಗೆ ಬೈಕ್
ರಾಲಿ ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಾಲು-ಹಣ್ಣು ವಿತರಣೆ, ಸಂಜೆ 4 ಗಂಟೆಗೆ ಶ್ರೀ ಸಹಸ್ರಾರ್ಜುನ ಮಹಾರಾಜರ ಪುಷ್ಪಾಲಂಕೃತ ಭಾವಚಿತ್ರದ ಮೆರವಣಿಗೆ ನಡೆಯಲಿದೆ. 

ಸಂಜೆ 7 ಗಂಟೆಗೆ ಮಾಜಿ ಅಧ್ಯಕ್ಷ  ದಿ. ನಲ್ಲಿ ನಾಗರಾಜ್ ಮೆಹರ್ವಾಡೆ ವೇದಿಕೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, ಅಧ್ಯಕ್ಷತೆ ಯನ್ನು ಎಸ್.ಎಸ್.ಕೆ. ಸಮಾಜದ ಅಧ್ಯಕ್ಷ ಮೋಹನ್ ಎನ್. ಖೀರೋಜಿ ವಹಿಸಲಿದ್ದಾರೆ. ಉದ್ಘಾಟನೆಯನ್ನು ಎಸ್.ಎಸ್.ಕೆ. ಸಮಾಜದ ರಾಜ್ಯ ಅಧ್ಯಕ್ಷ ಶಶಿಕುಮಾರ್ ವಿ. ಮೆಹರ್ವಾಡೆ ಉದ್ಘಾಟನೆ ಮಾಡಲಿದ್ದಾರೆ. 

ಮುಖ್ಯ ಅತಿಥಿಗಳಾಗಿ ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್, ಶಾಸಕ ಬಿ.ಪಿ. ಹರೀಶ್, ಮಾಜಿ ಶಾಸಕ ಎಚ್.ಎಸ್. ಶಿವಶಂಕರ್, ಎಸ್.‌ ರಾಮಪ್ಪ, ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್, ಜಿ.ಪಂ. ಮಾಜಿ ಅಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ, ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್, ನಗರಸಭೆ ಅಧ್ಯಕ್ಷೆ ಕವಿತಾ ಮಾರುತಿ, ಮಾಜಿ ನಗರ ಸಭೆ ಅಧ್ಯಕ್ಷ ಕೃಷ್ಣ ಸಾ ಭೂತೆ, ಹುಬ್ಬಳ್ಳಿ ಅರ್ಜುನ ಸಾ. ಪವರ್, ಕೆ. ವಿನಯ ಪವರ್, ದಾವಣಗೆರೆ ರವಿಚಂದ್ರ, ಕಾಂಗ್ರೆಸ್ ಮುಖಂಡ ನಿಖಿಲ್ ಕೊಂಡಜ್ಜಿ ಇತರರು ಭಾಗವಹಿಸಲಿದ್ದಾರೆ. 

ಎಸ್.ಎಸ್.ಕೆ. ಸಮಾಜಕ್ಕೆ ಭದ್ರವಾದ ಬುನಾದಿ ಹಾಕಿ ಸಂಘಟನೆ ಬಲಪಡಿಸಿದ ರೇವಣಸಾ ತುಳಜಣಸಾ ಭೂತೆ ಅವರೆಗೆ ಸಮಾಜಕ್ಕೆ ಸಲ್ಲಿಸಿದ ಸೇವೆಯನ್ನು ಗುರುತಿಸಿ ಶ್ರೀ ಸಹಸ್ರಾರ್ಜುನ ಸೇವಾ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.  

error: Content is protected !!