ನಗರದಲ್ಲಿ `ಸ್ಕೈ ವಾಕ್’ ನಿರ್ಮಿಸಲು ಆಗ್ರಹ

ದಾವಣಗೆರೆ, ನ.7- ನಗರದ ಮುಖ್ಯ ವೃತ್ತ  ಹಾಗು ರಸ್ತೆಗಳಲ್ಲಿ  ಫುಟ್ ಅಂಡರ್ ಪಾಸ್, ಫುಟ್ ಓವರ್ ಬ್ರಿಜ್  ಮತ್ತು ಸ್ಕೈ ವಾಕ್ ಗಳನ್ನು ನಿರ್ಮಿಸುವಂತೆ  `ಟೀಂ ನಮ್ಮ ದಾವಣಗೆರೆ’ ಒತ್ತಾಯಿಸಿದೆ.

ನಗರದಲ್ಲಿ ಸುಮಾರು 8.5 ಲಕ್ಷ ಜನಸಂಖ್ಯೆಯಿದೆ.   ನಗರವನ್ನು  ಸ್ಮಾರ್ಟ್ ಸಿಟಿ  ಹಾಗು ಅಮೃತ್ ಯೋಜನೆಗಳಿಗೆ  ಸೇರ್ಪಡೆಗೊಳಿ ಸಲಾಗಿದೆ.   ಅನೇಕ ಉನ್ನತ  ಶಿಕ್ಷಣ ಸಂಸ್ಥೆಗಳು ನಗರದಲ್ಲಿವೆ, ಮಧ್ಯ ಕರ್ನಾಟಕದ ಕೇಂದ್ರ ಬಿಂದು, ಶರವೇಗದಿಂದ  ಬೆಳೆಯುತ್ತಿರುವ ನಗರದ ಮುಖ್ಯ ವೃತ್ತಗಳಲ್ಲಿ ಹಾಗು ರಸ್ತೆಗಳಲ್ಲಿ ಪಾದಚಾರಿಗಳು ರಸ್ತೆ ದಾಟಲು  ಫುಟ್ ಅಂಡರ್ ಬ್ರಿಜ್, ಫುಟ್ ಓವರ್ ಬ್ರಿಜ್, ಜಿಪಿಎಸ್‌ ಸಿಸ್ಟಮ್ ವಿಥ್ ಟ್ರಾಫಿಕ್ ಮ್ಯಾನೇ ಜ್ಮೆಂಟ್, ಗ್ರೇಡ್ ಸೆಪರೇಟರ್ಸ್,  ಸ್ಕೈವಾಕ್‌ಗಳನ್ನು  ನಿರ್ಮಿಸಲು ಸ್ಮಾರ್ಟ್ ಸಿಟಿ ಅನುದಾನದಲ್ಲಿ ಕಲ್ಪಿಸಿದರೆ ನಾಗರಿಕರಿಗೆ ಅನುಕೂಲವಾಗುತ್ತದೆ. ಸಣ್ಣ ಪುಟ್ಟ ಅಪಘಾತಗಳು ತಪ್ಪುತ್ತವೆ. ವಾಹನಗಳು ಸುಗಮವಾಗಿ ಸಂಚರಿಸಬಹುದು.

ನಗರದ ರೈಲು ನಿಲ್ದಾಣದ ಮುಂಭಾಗ, ಜಯದೇವ ವೃತ್ತ, ಗಾಂಧಿ ಸರ್ಕಲ್,  ಅರುಣ ಚಿತ್ರಮಂದಿರ , ವಿದ್ಯಾರ್ಥಿ ಭವನ, ಗುಂಡಿ ಛತ್ರ ವೃತ , ಹಳೆ ಬಸ್ ನಿಲ್ದಾಣದ ಹತ್ತಿರ , ಶಂಕರ್ ವಿಹಾರ್ ಬಡಾವಣೆ, ಹೊಸ ಬಸ್ ನಿಲ್ದಾಣ ಮುಂಭಾಗ ಹೀಗೆ ಅನೇಕ ಕಡೆ ಈ ಪ್ರಯತ್ನವನ್ನು ಮಾಡಬಹುದು ಎಂದು   `ಟೀಂ ನಮ್ಮ ದಾವಣಗೆರೆ’ಯ  ರೋಹಿತ್. ಎಸ್.ಜೈನ್  ಮತ್ತು  ಸಂತೋಷ್ ಸವೂರ್   ಮನವಿ ಮಾಡಿದ್ದಾರೆ. 

error: Content is protected !!