ಸಿರಿಗೆರೆ ಬೃಹನ್ಮಠದಲ್ಲಿ ನಾಡಿದ್ದು `ತರಳಬಾಳು ನುಡಿ ಹಬ್ಬ’

ದಾವಣಗೆರೆ ಜಿಲ್ಲಾ ತರಳಬಾಳು ಜಗದ್ಗುರು ಬೃಹನ್ಮಠ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ

– ಬಿ. ವಾಮದೇವಪ್ಪ, ಜಿಲ್ಲಾಧ್ಯಕ್ಷರು, ಕಸಾಪ

ದಾವಣಗೆರೆ, ನ.5- ಸಿರಿಗೆರೆಯ ತರಳಬಾಳು ಜಗದ್ಗುರು ಬೃಹನ್ಮಠದ ಗುರು ಶಾಂತೇಶ್ವರ ದಾಸೋಹ ಮಂಟಪದಲ್ಲಿ ಕನ್ನಡ ರಾಜ್ಯೋತ್ಸವದ ನಿಮಿತ್ತ ಇದೇ ದಿನಾಂಕ 8ರಿಂದ 10ರ ವರೆಗೆ `ತರಳಬಾಳು ನುಡಿ ಹಬ್ಬ-2024′ ಕಾರ್ಯಕ್ರಮ ನಡೆಯಲಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ತಿಳಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತರಳಬಾಳು ಜಗದ್ಗುರು ಬೃಹನ್ಮಠ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಜರುಗಲಿದೆ ಎಂದು ಹೇಳಿದರು.

ನವೆಂಬರ್‌-8 : ಅಂದು ಬೆಳಗ್ಗೆ 9ಕ್ಕೆ ಕನ್ನಡ ಧ್ವಜಾರೋಹಣ ನೆರವೇರಲಿದ್ದು, ಡಾ. ಶಿವಮೂರ್ತಿ ಶಿವಾಚಾರ್ಯ ಶ್ರೀಗಳು ಸಾನ್ನಿಧ್ಯ ವಹಿಸಲಿದ್ದು, ಡಾ. ಪ್ರದೀಪ್‌ ಕುಮಾರ್‌ ಹೆಬ್ರಿ ಉದ್ಘಾಟಿಸಲಿದ್ದಾರೆ. 

ಇದಕ್ಕೂ ಮುನ್ನ 8 ಗಂಟೆಗೆ ಭುವನೇಶ್ವರಿ ದೇವಿಯ ಮೆರವಣಿಗೆ ಮತ್ತು ಸಿರಿಗೆರೆ ಶಾಲೆಯ 4 ಸಾವಿರ ಮಕ್ಕಳು ಸಹಸ್ರ ಕಂಠ ಕನ್ನಡ ಗೀತ ಗಾಯನ ಮಾಡಲಿದ್ದಾರೆ.

ಬೆಳಗ್ಗೆ 10ಕ್ಕೆ ಕನ್ನಡ ಸಾಹಿತ್ಯ ಮತ್ತು ಪರಂಪರೆ ವಿಷಯ ಕುರಿತು ಗೋಷ್ಠಿ ನಡೆಯಲಿದ್ದು, ಡಾ. ಕುಮಾರಚಲ್ಯ, ನೀಲಾವರ ಸುರೇಂದ್ರ ಅಡಿಗರು, ಡಾ. ಭೀಮಾಶಂಕರ ಜೋಷಿ ಅವರು ವಿಷಯ ಮಂಡಿಸುವರು.

ಇದೇ  ವೇಳೆ ಸರ್ವಜ್ಞನ ವಚನಗಳು, ಡಿವಿಜಿಯವರ ಮಂಕುತಿಮ್ಮನ ಕಗ್ಗದ ತಂತ್ರಾಂಶ ಬಿಡುಗಡೆ ಮಾಡಲಾಗುವುದು.  ಕಸಾಪ ಗೌರವ ಕಾರ್ಯದರ್ಶಿಗಳಾದ ರಾಮಲಿಂಗ ಶೆಟ್ಟಿ ಮತ್ತು ಡಾ. ಪದ್ಮಿನಿ ನಾಗರಾಜು ಪಾಲ್ಗೊಳ್ಳಲಿದ್ದಾರೆ.

ಮಧ್ಯಾಹ್ನ 2.30ಕ್ಕೆ ವಿಶ್ರಾಂತ ಪ್ರಾಚಾರ್ಯ ಎಂ.ಜಿ. ರಂಗಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಚರ್ಚಾ ಗೋಷ್ಠಿ ನಡೆಯಲಿದ್ದು, ಡಾ.ವಿ. ಜಯರಾಮಯ್ಯ, ಬೆಂಗಳೂರಿನ ಕಸಾಪ ಅಧ್ಯಕ್ಷ ಎಂ. ಪ್ರಕಾಶ ಮೂರ್ತಿ ಭಾಗವಹಿಸುವರು.  

ಸಂಜೆ 6.30ಕ್ಕೆ ರೈತರ ಧ್ವನಿ, ಬೆಟ್ಟದ ಮೇಲೊಂದು ಮನೆಯ ಮಾಡಿ ಹಾಗೂ ಟ್ಯಾಬ್ಲೆಟ್‌ ಎಂಬ ನಾಟಕ ಪ್ರದರ್ಶನ ನಡೆಯಲಿದೆ.

ನವೆಂಬರ್‌-9 : ಬೆಳಗ್ಗೆ 10ಕ್ಕೆ ತುಮಕೂರು ಹಿರೇಮಠದ ಡಾ. ಶಿವಾನಂದ ಶಿವಾಚಾರ್ಯ ಶ್ರೀಗಳ ಸಮ್ಮುಖದಲ್ಲಿ ಕವಿಗೋಷ್ಠಿ ನಡೆಯ ಲಿದ್ದು, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎಲ್‌.ಎನ್‌. ಮುಕುಂದರಾಜ್‌ ಅಧ್ಯಕ್ಷತೆ ವಹಿಸುವರು. ಆರಿಫ್‌ರಜಾ, ಲಿಂಗಯ್ಯ ಬಿ. ಹಿರೇಮಠ ಮತ್ತು ಕೆ.ಎಂ ಶಿವಸ್ವಾಮಿ ಸೇರಿದಂತೆ ಅನೇಕ ಕವಿಗಳು ಭಾಗವಹಿಸುವರು.

ಮಧ್ಯಾಹ್ನ 2.30ಕ್ಕೆ ಜಾನಪದ ಸಂಸ್ಕೃತಿಯ ತಾಯಿಬೇರು ಕಾರ್ಯಕ್ರಮ ನಡೆಯಲಿದ್ದು, ಡಾ. ಚಿಕ್ಕಣ್ಣ ಎಣ್ಣೆಕಟ್ಟೆ, ಡಾ. ಕುರುವ ಬಸವರಾಜ್‌ ಹಾಗೂ ಡಾ. ನಾಗಪುಷ್ಪಲತಾ ವಿವಿಧ ವಿಷಯಗಳನ್ನು ಮಂಡಿಸಲಿದ್ದಾರೆ. ಎಂ. ಶೈಲಕುಮಾರ್‌, ಬಿ.ಟಿ. ನಾಗೇಶ್‌ ಉಪಸ್ಥಿತರಿರು ವರು. ಸಂಜೆ 6.30ಕ್ಕೆ ಸುಗಮ ಸಂಗೀತ ಮತ್ತು ಕವಿ ನಮನ ಕಾರ್ಯಕ್ರಮ ನಡೆಯಲಿದೆ. 

ನವೆಂಬರ್‌-10 : ಅಂದು ಬೆಳಗ್ಗೆ 10ಕ್ಕೆ ಹೊಸನಗರದ ಅಭಿನವ ಚನ್ನಬಸವ ಶ್ರೀಗಳ ಸಮ್ಮುಖದಲ್ಲಿ `ಮಹಿಳೆ ಮತ್ತು ಯುವ ಜನತೆ’ ವಿಷಯ ಕುರಿತು ಗೋಷ್ಠಿ ನಡೆಯಲಿದೆ. ಡಾ. ಗೀತಾ ಬಸವರಾಜ್‌, ಸಂಧ್ಯಾ ಶೆಣೈ ಹಾಗೂ ಅಶೋಕ್‌ ಎಸ್‌. ಹಂಚಲಿ ವಿಷಯ ಮಂಡಿಸು ವರು. ಡಾ.ಹೆಚ್‌.ಎಲ್‌. ಮಲ್ಲೇಶಗೌಡ ಹಾಗೂ ನಿಷ್ಠಿ ರುದ್ರಪ್ಪ ಭಾಗವಹಿಸುವರು. 

ಮಧ್ಯಾಹ್ನ 2.30ಕ್ಕೆ ಮರೆಯಲಾಗದ ಮಹನೀಯರು ವಿಷಯ ಕುರಿತು ಗೋಷ್ಠಿ ಜರುಗಲಿದ್ದು,  ಮೂಲೆಗದ್ದೆ ಅಭಿನವ ಚನ್ನಬಸವ ಶ್ರೀಗಳು, ಡಾ. ಮಹಾಂತೇಶ್‌ ಬಿರಾದಾರ, ಅನಂತ ದೇಶಪಾಂಡೆ ಹಾಗೂ ಡಾ.ಹೆಚ್‌.ಟಿ. ಶೈಲಜಾ ವಿಷಯ ಮಂಡಿಸುವರು.

ಸಂಜೆ 6.30ಕ್ಕೆ ಸಮಾರೋಪ ನಡೆಯಲಿದ್ದು, ವಿಶ್ರಾಂತ ಪ್ರಾಧ್ಯಾಪಕ ಡಾ.ಹೆಚ್‌.ಎಸ್‌. ಹರಿಶಂಕರ್‌ ಸಮಾರೋಪ ನುಡಿಗಳನ್ನಾಡುವರು. ಡಾ.ಬಿ.ಎಂ. ಪಟೇಲ ಪಾಂಡು, ಬಿ. ವಾಮದೇವಪ್ಪ, ಕೆ.ಎಸ್‌. ಸಿದ್ದಲಿಂಗಪ್ಪ ಭಾಗವಹಿಸುವರು.

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಮತ್ತು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡ ಸಾಹಿತಿಗಳ ಹಾಗೂ ವಚನ ಸಾಹಿತ್ಯ, ದಾಸ ಸಾಹಿತ್ಯದ ಪುಸ್ತಕಗಳ ಪ್ರದರ್ಶನ ಏರ್ಪಡಿಸಲಾಗಿದೆ.  

ನುಡಿಹಬ್ಬದಲ್ಲಿ ಭಾಗವಹಿಸುವ ಶಿಕ್ಷಕರು ಮತ್ತು ಸಾರ್ವಜನಿಕರಿಗೆ ನಗರದ ಕನ್ನಡ ಭವನ ದಿಂದ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ.  ಭಾಗವಹಿಸುವವರು ನಾಡಿದ್ದು ದಿನಾಂಕ 7ರೊಳಗೆ ಹೆಸರು ನೋಂದಾಯಿಸಬಹುದು. ವಿವರಕ್ಕೆ ಸಂಪರ್ಕಿಸಿ : 9449246195, 9449320703.

ಸುದ್ದಿಗೋಷ್ಠಿಯಲ್ಲಿ ಬಿ. ದಿಳ್ಳಪ್ಪ, ಎನ್.ಎಸ್. ರಾಜು, ಮಲ್ಲಮ್ಮ ನಾಗರಾಜ್, ನಾಗರಾಜ ಸಿರಿಗೆರೆ ಹಾಗೂ ಜಿಗಳಿ ಪ್ರಕಾಶ್ ಇದ್ದರು.

error: Content is protected !!