ನಗರದಲ್ಲಿ ನಾಳೆ ವೃತ್ತಿರಂಗ ಗೀತೆಗಳ ಕಲಿಕಾ ಕಾರ್ಯಾಗಾರ ಸಮಾರೋಪ

ದಾವಣಗೆರೆ, ನ.5- ವೃತ್ತಿ ರಂಗಭೂಮಿ ರಂಗಾಯಣದ ವತಿಯಿಂದ ನಗರದ ಜಯದೇವ ವೃತ್ತದ ಶಿವಯೋಗ ಮಂದಿರದಲ್ಲಿ ನಾಡಿದ್ದು ದಿನಾಂಕ 7ರ ಗುರುವಾರ ಸಂಜೆ 6ಕ್ಕೆ ರಂಗ ಸಂಗೀತ : ವೃತ್ತಿರಂಗ ಗೀತೆಗಳ ಕಲಿಕಾ ಕಾರ್ಯಾಗಾರದ ಸಮಾರೋಪ ಮತ್ತು ಅಭಿನಯ ಸಂಗೀತ ಪ್ರದರ್ಶನ ನಡೆಯಲಿದೆ ಎಂದು ರಂಗಾಯಣದ ನಿರ್ದೇಶಕ ಮಲ್ಲಿಕಾರ್ಜುನ್‌ ಕಡಕೋಳ ತಿಳಿಸಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುಮಕೂರಿನ ಕೇಂದ್ರ ಸಂಗೀತ-ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ. ಲಕ್ಷ್ಮಣದಾಸ್‌ ಸಮಾರೋಪ ನುಡಿಗಳನ್ನಾಡಲಿದ್ದು, ಹಿರಿಯ ರಂಗಕರ್ಮಿ ಬಾ.ಮ. ಬಸವರಾಜಯ್ಯ  ಮುಖ್ಯ ಅತಿಥಿಯಾಗಿ ಭಾಗವಹಿಸುವರು ಎಂದರು.

ಇದೇ ವೇಳೆ ಸುವರ್ಣ ಕರ್ನಾಟಕ ಪ್ರಶಸ್ತಿ ಪುರಸ್ಕೃತೆ ಸಾವಿತ್ರಿ ರಿತ್ತಿ, ಹಿರಿಯ ರಂಗ ನಿರ್ದೇಶಕ ಡಾ. ಪ್ರಕಾಶ್‌ ಗರುಡ ಮತ್ತು ಕಾರ್ಯಗಾರದ ನಿರ್ದೇಶಕ ರಾಘವ ಕಮ್ಮಾರ್‌ ಅವರುಗಳನ್ನು ಸನ್ಮಾನಿಸಲಾಗುವುದು.  

ವೃತ್ತಿರಂಗ ಗೀತೆಗಳ ಕಲಿಕಾ ಕಾರ್ಯಾಗಾರಕ್ಕೆ 39 ಜನ ಅರ್ಜಿ ಸಲ್ಲಿಸಿದ್ದು, ಅದರಲ್ಲಿ 18 ಜನರನ್ನು ಆಯ್ಕೆಗೊಳಿಸಿ ಅವರೆಲ್ಲರಿಗೂ ವೃತ್ತಿ ರಂಗ ಗೀತೆಗಳ ಕಲಿಕಾ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಹೇಳಿದರು.

ಈ ವೇಳೆ ಕನ್ನಡ ಮತ್ತು ಸಂಸ್ಕೃತ ಇಲಾಖೆಯ  ಉಪ ನಿರ್ದೇಶಕ ರವಿಚಂದ್ರ ಸುದ್ದಿಗೋಷ್ಠಿಯಲ್ಲಿದ್ದರು.

error: Content is protected !!