ಜಗಳೂರು,ನ.4- ಜಗಳೂರು ಪಟ್ಟಣ ಪಂಚಾಯ್ತಿಯ 9ನೇ ವಾರ್ಡ್ಗೆ ಉಪ ಚುನಾವಣೆ ನಡೆಸಲು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ವೇಳಾ ಪಟ್ಟಿ ಪ್ರಕಟಿಸಿ ಅಧಿಸೂಚನೆ ಹೊರಡಿಸಿದ್ದಾರೆ.
ಹಿಂದುಳಿದ ವರ್ಗ `ಬ’ಗೆ ಮೀಸಲಿದ್ದು, ನಾಮಪತ್ರ ಸಲ್ಲಿಸಲು ಇದೇ ದಿನಾಂಕ 11 ಕೊನೆಯ ದಿನವಾಗಿದೆ. 12ಕ್ಕೆ ನಾಮಪತ್ರ ಪರಿಶೀಲನೆ, 14ಕ್ಕೆ ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿರುತ್ತದೆ. ದಿನಾಂಕ 23ರಂದು ಚುನಾವಣೆ ನಡೆಯಲಿದೆ.
ಸದಸ್ಯ ಬಿ.ಟಿ. ರವಿಕುಮಾರ್ ಅವರ ಸದಸ್ಯತ್ವವು ಹೈಕೋರ್ಟ್ ಆದೇಶದಂತೆ ರದ್ದಾಗಿದ್ದು, ತೆರವಾದ ಈ ಸ್ಥಾನಕ್ಕೆ ಉಪಚುನಾವಣೆ ನಡೆಯಲಿದೆ.