ಇಂದು ಬಿಜೆಪಿ ಪ್ರತಿಭಟನೆ
ವಕ್ಫ್ ಭೂ ಕಬಳಿಕೆ ವಿರುದ್ಧ ಬಿಜೆಪಿ ನಾಳೆ ದಿನಾಂಕ 4 ರಿಂದ ನಿರಂತರ ಹೋರಾಟ ನಡೆಸಲಾಗುತ್ತಿದ್ದು, ಸಂತ್ರಸ್ತರಿಗೆ ಬಿಜೆಪಿಯಿಂದ ಕಾನೂನು ಹೋರಾಟಕ್ಕೆ ಬೇಕಾದ ನೆರವನ್ನು ಸಹ ನೀಡಲಾಗುವುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ್ ನಾಗಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಾಳೆ ಸೋಮವಾರ ಬೆಳಿಗ್ಗೆ 11 ಗಂಟೆಗೆ ಬಿಜೆಪಿ ಕಚೇರಿಯಿಂದ ಉಪವಿಭಾಗಾಧಿಕಾರಿ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ಮೂಲಕ ತೆರಳಿ ಮನವಿ ಸಲ್ಲಿಸಲಾಗುವುದು ಎಂದರು.
ಪಹಣಿ ಪರಿಶೀಲನಾ ಅಭಿಯಾನ: ಬಿಜೆಪಿಯಿಂದ ರೈತರಿಗೆ ಅನುಕೂಲವಾಗ ಲೆಂದು ಪಹಣಿ ಪರಿಶೀಲನಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ರೈತರು ಪಹಣಿ ಪರಿಶೀಲನೆ ಮಾಡಿಕೊಳ್ಳಲು 98450 95092 ಗೆ ಸಂಪರ್ಕಿಸುವಂತೆ ಕೋರಿದರು.
ದಾವಣಗೆರೆ, ನ. 3- ಹಿಂದುಗಳಿಗೆ ಸೇರಿದ ಜಮೀನು, ಮಠ ಮಾನ್ಯಗಳ, ದೇವಸ್ಥಾನಗಳ ಮತ್ತು ಪರಿಶಿಷ್ಟರ ಜಮೀನನ್ನು ವಕ್ಫಬೋರ್ಡ್‌ಗೆ ಸ್ವಾಧೀನಪಡಿಸಿಕೊಳ್ಳಲು ಹವಣಿಸುತ್ತಿದ್ದು, ಕೋಮುವಾದಕ್ಕೆ ಪ್ರಚೋದನೆ ನೀಡುತ್ತಿರುವ ಸಚಿವ ಜಮೀರ್ ಅಹಮದ್ ಅವರನ್ನು ಸಂಪುಟ ದಿಂದ ವಜಾಗೊಳಿಸಬೇಕೆಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಒತ್ತಾಯಿಸಿದರು.
ಇಂದಿಲ್ಲಿ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣದ ರುವಾರಿಯಾಗಿದ್ದ ಸಚಿವ ಜಮೀರ್ ಅಹಮದ್ ಅವರು ಸೂಪರ್ ಸಿಎಂ ರೀತಿ ವರ್ತಿಸುತ್ತಿದ್ದಾರೆ ಎಂದು ಕಿಡಿ ಕಾರಿದರು.
1954 ರಲ್ಲಿ ಅಂದಿನ ಪ್ರಧಾನಿಯಾಗಿದ್ದ ಜವಾಹರ್ ಲಾಲ್ ನೆಹರು ಅವರು ವಕ್ಫ್ ಮಂಡಳಿ ಜಾರಿಗೆ ತಂದರು. ಪಿ.ವಿ. ನರಸಿಂಹರಾವ್ ಮಾರ್ಪಾಡು ಮಾಡಿ 1992 ರಲ್ಲಿ ಅನುಷ್ಠಾನಗೊಳಿಸಿದರು. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ತಿದ್ದುಪಡಿ ಮಾಡಿದರು. ಹೀಗೆ ಅಲ್ಪಸಂಖ್ಯಾತರ ಮತಗಳ ತುಷ್ಠೀಕರಣಕ್ಕಾಗಿ ನಿರ್ಮಾಣಗೊಂಡಿರುವ ವಕ್ಫ್ ಬೋರ್ಡ್ ದೇಶ ಹಾಗೂ ರಾಜ್ಯಕ್ಕೆ ಮಾರಕವಾಗಿದೆ ಎಂದು ದೂರಿದರು.
ದೇವಸ್ಥಾನ, ಮಠಮಾನ್ಯ, ಪರಿಶಿಷ್ಟರ ಮತ್ತು ಹಿಂದುಳಿದವರ ಜಮೀನನ್ನು ವಕ್ಫ್‌ಬೋರ್ಡ್ ಗೆ ಸ್ವಾಧೀನಪಡಿಸಿಕೊಂಡು ಅಲ್ಪಸಂಖ್ಯಾತರ ಮತಗಳ ತುಷ್ಠೀಕರಣಕ್ಕೆ ಮುಂದಾಗಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ರಾಜ್ಯಾದ್ಯಂತ ಹೋರಾಟಕ್ಕೆ ಕರೆಕೊಟ್ಟ ಹಿನ್ನೆಲೆಯಲ್ಲಿ ಮತ್ತು ಮೂರು ಉಪ ಚುನಾವಣೆಯ ಮೇಲೆ ಪರಿಣಾಮ ಬೀರಲಿರುವ ಕಾರಣ ಹೆದರಿಕೊಂಡು ಸಿಎಂ ರೈತರಿಗೆ ನೀಡಿರುವ ನೋಟಿಸ್ ಹಿಂಪಡೆಯಲು ಸೂಚನೆ ನೀಡಿದ್ದಾರೆಂದು ತಿಳಿಸಿದರು.
ಸಿಎಂ ನೋಟಿಸ್ ವಾಪಸ್ ಪಡೆಯಲು ಕೇವಲ ಮೌಕಿಕ ಸೂಚನೆ ನೀಡಿದ್ದು, ಈಗಾಗಲೇ ವಕ್ಫ್ ಬೋರ್ಡ್‌ಗೆ ಬೆಲೆ ಬಾಳುವ ಜಮೀನು ಸೇರ್ಪಡೆಯಾದ ಬಗ್ಗೆ ಮಾತನಾಡಿಲ್ಲ. ಇದನ್ನು ಬಿಜೆಪಿ ಒಪ್ಪುವುದಿಲ್ಲ. ಕಲಂ 11 ರಲ್ಲಿ ನಮೂ ದಾಗಿರುವುದನ್ನು ಸಂಪೂರ್ಣ ರದ್ದು ಮಾಡಬೇಕು. ಅಲ್ಲಿಯವರೆಗೂ ನಾವು ಹೋರಾಟ ಮುಂದುವ ರೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ರಾಜ್ಯದಲ್ಲಿ ಮಠಮಾನ್ಯ, ದೇವಸ್ಥಾನ, ರೈತರ ಜಮೀನುಗಳನ್ನು ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದವರಿಗೆ ಸೇರಿದ ಭೂಮಿಯನ್ನು ಅಲ್ಪಸಂಖ್ಯಾತ ಅಧಿಕಾರಿಗಳು, ಕಾಂಗ್ರೆಸ್ ಪಕ್ಷದ ಕೆಲವು ರಾಜಕಾರಣಿಗಳು ವಕ್ಫ್‌ಬೋರ್ಡ್ ಗೆ ಹಸ್ತಾಂತರ ಮಾಡುತ್ತಿದ್ದಾರೆಂದು ಆರೋಪಿಸಿದರು.
ವಕ್ಫ್‌ಬೋರ್ಡ್ ಹಿಂದೂಗಳ ಜಮೀನನ್ನು ಕಬಳಿಸುವ ಸಂಚು ನಡೆಸಿದ್ದು, ಮಠಾಧೀಶರು ಕೂಡ ಪತ್ರಚಳವಳಿ ಮಾಡಿ ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕೆಂದು ರೇಣುಕಾಚಾರ್ಯ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಎಸ್.ಎ. ರವೀಂದ್ರನಾಥ್, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ.ಎ.ಹೆಚ್. ಶಿವಯೋಗಿಸ್ವಾಮಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಐರಣಿ ಅಣ್ಣೇಶ್, ಮಾಡಾಳು ಮಲ್ಲಿಕಾರ್ಜುನ್, ಅರವಿಂದ್, ಬಿ.ಎಂ. ಸತೀಶ್ ಉಪಸ್ಥಿತರಿದ್ದರು.