ದ್ವಿಚಕ್ರ ಬೈಕ್ ಟ್ಯಾಕ್ಸಿ ರದ್ಧುಪಡಿಸಿ ಚಾಲಕರ ಅಭಿವೃದ್ಧಿ ನಿಗಮ ಸ್ಥಾಪಿಸಲು ಆಗ್ರಹ

ದಾವಣಗೆರೆ, ನ.3-   ಅನಧಿಕೃತ ದ್ವಿಚಕ್ರ ಬೈಕ್ ಟ್ಯಾಕ್ಸಿಗಳನ್ನು ರದ್ದುಪಡಿಸಿ, ಆಟೋ, ಕ್ಯಾಬ್ ಚಾಲಕರ ಹಿತದೃಷ್ಟಿಯಿಂದ  ಚಾಲಕರ ಅಭಿವೃದ್ಧಿ ನಿಗಮವನ್ನು ಸ್ಥಾಪಿಸುವಂತೆ ಕರ್ನಾಟಕ ಚಾಲಕರ ಒಕ್ಕೂಟದ ರಾಜ್ಯ ಸಂಚಾಲಕ ಡಿ.ಆರ್.ಅರವಿಂದಾಕ್ಷ ಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವರನ್ನು ಆಗ್ರಹಿಸಿದ್ದಾರೆ.

ಬಹುದಿನಗಳ ಬೇಡಿಕೆಯಾದ  ಈ ಎರಡೂ ವಿಚಾರವಾಗಿ ಕ್ರಮಕೈಗೊಳ್ಳದೇ ಇರುವುದು ನಾಡಿನ ಚಾಲಕರಿಗೆ ನೋವಿನ ಸಂಗತಿಯಾಗಿದೆ.   ಈ ಕೂಡಲೇ ಬೈಕ್ ಟ್ಯಾಕ್ಸಿಯನ್ನು ಗಂಭೀರ ಸಮಸ್ಯೆಯೆಂದು ಪರಿಗಣಿಸಿ ನಿಷೇಧಿಸಬೇಕು. ಇಲ್ಲದಿದ್ದಲ್ಲಿ  ಮುಂದಿನ ತಿಂಗಳಿಂದ   `ಬೈಕ್ ಟ್ಯಾಕ್ಸಿ ನಿಷೇಧಿಸಿ, ಇಲ್ಲವೇ ಆಟೋ ಕ್ಯಾಬ್ ಚಾಲಕರಿಗೆ ದಯಾಮರಣ ಕರುಣಿಸಿ’ ಎಂದು ಸರ್ಕಾರಕ್ಕೆ ಮನವಿ ಮಾಡುವ ಮೂಲಕ ಚಾಲಕರ ಇಂದಿನ ದಯನೀಯ ಪರಿಸ್ಥಿತಿಯನ್ನು ಅರ್ಥ ಮಾಡಿಸುವ ಕೆಲಸ ಮಾಡಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

error: Content is protected !!