ಹೊನ್ನಾಳಿ, ನ.3- ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲ್ಲೂಕಿನಲ್ಲೂ ರೈತರ ಪಲವ ತ್ತಾದ ಕೃಷಿ ಭೂಮಿ, ಹಿಂದುಗಳ ಸ್ಮಶಾನ, ದೇವ ಸ್ಥಾನ ಜಾಗ, ಕಂದಾಯ, ಗೋಮಾಳ ಜಾಗವನ್ನು ವಕ್ಫ್ ಬೋರ್ಡ ಹೆಸರಿಗೆ ಮಾಡಿಕೊಳ್ಳುತ್ತಿರುವ ಕ್ರಮವನ್ನು ವಿರೋಧಿಸಿ ನಾಳೆ ದಿನಾಂಕ 4ರ ಸೋಮವಾರ ಬೆಳಗ್ಗೆ 10 ಕ್ಕೆ ಹೊನ್ನಾಳಿ ಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ಅವರು ತಾಲ್ಲೂಕಿನ ಗಿರಿಜಮ್ಮ ಕೋ ಈರಣ್ಣ ಎಂಬ ಹೆಸರಿನ 11 ಎಕರೆ 38 ಗುಂಟೆ ಜಮೀನು ಸೇರಿದಂತೆ ಅನೇಕ ಸಾರ್ವಜನಿಕರ ಆಸ್ತಿಗಳನ್ನು ವಕ್ಫ್ ಬೋರ್ಡ ಹೆಸರಿಗೆ ಮಾಡಿಕೊಂಡಿರುವ ಬಗ್ಗೆ ಪೂರ್ವಭಾವಿ ಸಭೆಯಲ್ಲಿ ದಾಖಲೆ ಬಗಹಿರಂಗ ಪಡಿಸಿ ಮಾತನಾಡಿ, ಸಂಗೊಳ್ಳಿರಾಯಣ್ಣ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ತಾಲ್ಲೂಕು ಕಚೇರಿ ಮುತ್ತಿಗೆ ಹಾಕಿ ಹೋರಾಟ ಹಮ್ಮಿಕೊಂಡಿರುವುದಕ್ಕೆ ಹಿಂದೂ ಸಂಘಟನೆಗಳು ಪಾಲ್ಗೊಂಡು ಈ ಹೋರಾಟವನ್ನ ಬೆಂಬಲಿಸಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಮಂಡಲದ ಅಧ್ಯಕ್ಷ ಜೆ.ಕೆ.ಸುರೇಶ್, ಬಿಜೆಪಿ ಮುಖಂಡರಾದ ಮಂಜುನಾಥ್, ಶಿವಾನಂದ, ರಮೇಶ್, ಕುಬೇರಪ್ಪ, ರಂಗನಾಥ, ಇಂಚರ ಮಂಜುನಾಥ, ಮಹೇಶ ಹುಡೇದ, ಶ್ರೀಧರ, ನರಸಿಂಹಪ್ಪ ಇನ್ನಿತರರಿದ್ದರು.