ನಗರದಲ್ಲಿ ಇಂದು ಅಂತರ್ ಕಾಲೇಜು ಜುಡೋ ಪಂದ್ಯಾವಳಿ, ವಿವಿ ತಂಡದ ಆಯ್ಕೆ

ಮಾಸಬ ಕಲಾ ಮತ್ತು ವಾಣಿಜ್ಯ ಕಾಲೇಜು ಹಾಗೂ ಕ್ರೀಡಾ ವಿಭಾಗ ಮತ್ತು ಹಳೆಯ ವಿದ್ಯಾರ್ಥಿಗಳ ಸಂಘ ಇವರುಗಳ ಸಂಯುಕ್ತಾಶ್ರಯದಲ್ಲಿ 2024-25ನೇ ಸಾಲಿನ ದಾವಣಗೆರೆ ವಿಶ್ವವಿದ್ಯಾನಿಲಯದ ಅಂತರ್ ಕಾಲೇಜು ಪುರುಷ ಹಾಗೂ ಮಹಿಳೆಯರ ಜುಡೋ ಪಂದ್ಯಾವಳಿ ಮತ್ತು ವಿವಿ ತಂಡದ ಆಯ್ಕೆ ಕಾರ್ಯಕ್ರಮವು ಇಂದು ಬೆಳಿಗ್ಗೆ 10.30ಕ್ಕೆ ಕಾಲೇಜಿನ ಶ್ರೀಮತಿ ಪಾರ್ವತಮ್ಮ ಸಭಾಂಗಣದಲ್ಲಿ ನಡೆಯಲಿದೆ.

ಕಾರ್ಯಕ್ರಮವನ್ನು ಯುವ ಮುಖಂಡ ಸಮರ್ಥ್ ಶಾಮನೂರು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ದಾವಿವಿ ಶಿಕ್ಷಣ ನಿಕಾಯ ಮುಖ್ಯಸ್ಥ ಡಾ. ಕೆ ವೆಂಕಟೇಶ್, ದಾವಿವಿ ದೈಹಿಕ ಶಿಕ್ಷಕ ನಿರ್ದೇಶಕರ ಸಂಘದ ಅಧ್ಯಕ್ಷ ಡಾ. ಸಿ. ಶಂಕರಪ್ಪ, ಸಂಘದ ಮಹಿಳಾ ಉಪಾಧ್ಯಕ್ಷರಾದ ಡಾ. ಎಂ. ಆರ್. ರೇಖಾ, ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಇಂದುಧರ್ ನಿಶಾನಿಮಠ್, ಕಾರ್ಯದರ್ಶಿ ಈ. ಬಸವರಾಜ್ ಪಾಲ್ಗೊಳ್ಳಲಿದ್ದಾರೆ. ದಾವಿವಿ ಕ್ರೀಡಾಧಿಕಾರಿ ಡಾ.ಬಿ. ಹೆಚ್. ವೀರಪ್ಪ, ಐಕ್ಯೂಎಸ್‌ಸಿ ಸಂಚಾಲಕ ಡಾ. ವಿಜಯಕುಮಾರ್, ಕ್ರೀಡಾ ಸಂಚಾಲಕ ಪ್ರವೀಣ್ ಕುಮಾರ್, ಕ್ರೀಡಾ ಸದಸ್ಯ ಡಾ.ಎಂ. ಅಂಜನಪ್ಪ, ಡಾ. ಆರ್. ರಾಘವೇಂದ್ರ, ಡಾ. ಪ್ರಶಾಂತ್ ಉಪಸ್ಥಿತರಿರಲಿದ್ದು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಜಿ.ಸಿ. ನೀಲಾಂಬಿಕ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ.

ಇಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಆರ್.ಎಲ್. ಲಾ ಕಾಲೇಜಿನ ಪ್ರಾಂಶುಪಾಲರಾದ ಜಿ.ಎಸ್. ಯತೀಶ್ ಬಹುಮಾನ ವಿತರಣೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಾ.ಕೆ ವೆಂಕಟೇಶ್, ಬಸವರಾಜು ವಿ. ದಮ್ಮನಹಳ್ಳಿ, ಇಂದೂಧರ ನಿಶಾನಿಮಠ, ಈ. ಬಸವರಾಜ್ ಪಾಲ್ಗೊಳ್ಳಲಿದ್ದಾರೆ. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಟಿ. ಆರ್. ರಂಗಸ್ವಾಮಿ ಉಪಸ್ಥಿತರಿರಲಿದ್ದು, ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಜೆ.ಸಿ. ನೀಲಾಂಬಿಕ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ.

error: Content is protected !!