ದಾವಣಗೆೆರೆ, ಅ. 29- ದೀಪಾವಳಿ ಹಬ್ಬದ ಪ್ರಯುಕ್ತ ನಾಳೆ ದಿನಾಂಕ 30 ರ ಬುಧವಾರ ನೀರು ತುಂಬಿಸುವುದು, ನಾಡಿದ್ದು ದಿನಾಂಕ 31 ರ ಗುರುವಾರ ಮಧ್ಯಾಹ್ನ 2 ರವರೆಗೆ ಚತುರ್ದಶಿ ಎಣ್ಣೆಯ ಅಭ್ಯಂಜನ ಸ್ನಾನ, ಮಧ್ಯಾಹ್ನ 3 ರವರೆಗೆ ಅಂಗಡಿ, ಕಚೇರಿಗಳಲ್ಲಿ ಸಾಮೂಹಿಕ ಲಕ್ಷ್ಮೀಪೂಜೆ ಮಾಡುವುದು. ನವೆಂಬರ್ 1 ರ ಶುಕ್ರವಾರ ಬೆಳಿಗ್ಗೆಯಿಂದ ಮಧ್ಯಾಹ್ನ 4.30 ರವರೆಗೆ ಮನೇಲಿ ಅಮಾವಾಸ್ಯೆ ಮತ್ತು ಲಕ್ಷ್ಮೀಪೂಜೆ ಮಾಡಬಹುದು.
ನಂತರ ಸಂಜೆ 5 ರಿಂದ ರಾತ್ರಿ 10 ರವರೆಗೂ ಹಟ್ಟಿ ಪೂಜೆ, ಹಿರಿಯರಿಗೆ ಎಡೆ ಹಾಕುವುದು, ದೀಪಾರಾಧನೆ ಮಾಡಬಹುದು. ನ. 2 ರಂದು ಶನಿವಾರ ಬೆಳಿಗ್ಗೆಯಿಂದ ಮಧ್ಯಾಹ್ನ 4 ರವರೆೆಗೆ ಹಟ್ಟಿಪೂಜೆ, ಹಿರಿಯರ ಪೂಜೆ, ದೀಪಾರಾಧನೆ ಮಾಡಬಹುದು ಎಂದು ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.