ಪಾರಂಪರಿಕ ವೈದ್ಯ ಪರಿಷತ್ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಇಂದು ಬೆಳಿಗ್ಗೆ 11 ಗಂಟೆಗೆ ನಗರದ ಕುವೆಂಪು ಕನ್ನಡ ಭವನದಲ್ಲಿ ಧನ್ವಂತರಿ ಜಯಂತ್ಯುತ್ಸವ ಹಮ್ಮಿಕೊಳ್ಳಲಾಗಿದೆ.
ಧನ್ವಂತರಿ ಜಯಂತ್ಯುತ್ಸವದ ಪ್ರಯುಕ್ತ ಅಸಾಧ್ಯವಾದ ತಲೆನೋವಿಗೆ ಮತ್ತು ಮೂತ್ರಕೋಶದ ಕಲ್ಲು ನಿವಾರಣೆಗೆ ಉಚಿತ ಚಿಕಿತ್ಸಾ ಶಿಬಿರವನ್ನು ಏರ್ಪಡಿಸಲಾಗಿದೆ.
ಬೆಳಿಗ್ಗೆ 10 ಕ್ಕೆ ಪ್ರಾಥಮಿಕ ಹಂತದ ಆರೋಗ್ಯದಲ್ಲಿ ಗಿಡ ಮೂಲಿಕೆಗಳ ಉಪಯೋಗವನ್ನು ತಿಳಿಸುವ `ಹಿತ್ತ ಲಗಿಡವೇ ಮದ್ದು’ ಎನ್ನುವ ವಿಷಯ ಕುರಿತು ನುರಿತ ಪಾರಂಪರಿಕ ವೈದ್ಯರಿಂದ ಉಪನ್ಯಾಸ ನಡೆಯಲಿದೆ.
ಹೆಬ್ಬಾಳು ವಿರಕ್ತಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಬೆಳಿಗ್ಗೆ 11 ಕ್ಕೆ ಧನ್ವಂತರಿ ಪೂಜಾ ಕಾರ್ಯಕ್ರಮದ ಉದ್ಘಾಟನೆಯನ್ನು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಶಾಸಕ ಕೆ.ಎಸ್. ಬಸವಂತಪ್ಪ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ, ಪಾರಂಪರಿಕ ವೈದ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ನೇರ್ಲಿಗಿ ಗುರುಸಿದ್ಧಪ್ಪ, ಜಿಲ್ಲಾ ಸಂಚಾಲಕಿ ಕೆ.ಎಂ. ಪುಷ್ಪಲತಾ ಮತ್ತಿತರರು ಭಾಗವಹಿ ಸಲಿದ್ದಾರೆ. ಪಾರಂಪರಿಕ ವೈದ್ಯ ಪರಿಷತ್ ತಾಲ್ಲೂಕು ಅಧ್ಯಕ್ಷೆ ಶಿವಲಿಂಗಮ್ಮ ಅಧ್ಯಕ್ಷತೆ ವಹಿಸಲಿದ್ದಾರೆ.