ನಗರದ ಯುಬಿಡಿಟಿ ಕಾಲೇಜಿನಲ್ಲಿ ಇಂದು

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಘಟಕ ಕಾಲೇಜು ಆದ ನಗರದ ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂದು ಬೆಳಿಗ್ಗೆ 11 ಗಂಟೆಗೆ ವಿಟಿಯು ಮತ್ತು ಇ ಅಂಡ್ ಐ ವಿಭಾಗದ ಸಹಯೋಗದಲ್ಲಿ ವಿಟಿಯು ಕನ್ಸೋರ್ಟಿಯಮ್ ಇ – ರಿಸೋರ್ಸ್ ತರಬೇತಿಯ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಮುಖ್ಯ ಅತಿಥಿಗಳಾಗಿ ವಿಟಿಯು ಸ್ಕಿಲ್ ಡೆವೆಲಪ್ಮೆಂಟ್ ಸೆಂಟರ್‌ನ ನಿರ್ದೇಶಕರಾದ ಡಾ.ಸಂಧ್ಯಾ ಆರ್.ಅವ್ನೇಕರ್, ವಿಶೇಷ ಆಹ್ವಾನಿತರಾಗಿ ವಿಟಿಯುನ ಲೈಬ್ರರಿಯನ್, ಸಹ ಸಂಯೋಜಕ ಸೋಮರಾಯ್ ಬಿ. ತಳ್ಳೊಳ್ಳಿ ಭಾಗವಹಿಸಲಿದ್ದು, ಕಾಲೇಜಿನ ಪ್ರಾಂಶುಪಾಲ ಡಾ.ಡಿ.ಪಿ. ನಾಗರಾಜಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ.

error: Content is protected !!