ದಾವಣಗೆರೆ, ಅ.22- ನಗರದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯು ವಿಶ್ವ ಸಂಸ್ಥೆ ದಿನದ ಪ್ರಯುಕ್ತ `ನಿಲ್ಲದ ಯುದ್ಧ ದಾಹ; ವಿಶ್ವಸಂಸ್ಥೆ ನೀತಿ ನಿಯಮ ಬದಲಾವಣೆ ಅನಿವಾರ್ಯವೇ?’ ಎಂಬ ವಿಷಯದ ಕುರಿತು ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಿದೆ.
ಪ್ರಥಮ 3000 ರೂ. ದ್ವಿತೀಯ 2000 ರೂ. ಮತ್ತು ತೃತೀಯ 1000 ರೂಪಾಯಿ ಬಹುಮಾನ ನೀಡಲಾಗುವುದು ಎಂದು ರೆಡ್ ಕ್ರಾಸ್ ಸಂಸ್ಥೆ ಸಭಾಪತಿ ಡಾ. ಎ. ಎಂ.ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಆನಂದ್ ಜ್ಯೋತಿ ತಿಳಿಸಿದ್ದಾರೆ.
1000 ಪದಗಳು ಮೀರದಂತೆ, ಕನ್ನಡದಲ್ಲಿ ಸ್ವಂತ ಕೈ ಬರಹದಲ್ಲಿ ಪ್ರಬಂಧ ಬರೆದು 4.11.2024ರ ಒಳಗಾಗಿ ಅಂಚೆ ಮೂಲಕವಾಗಲೀ ಅಥವಾ ಖುದ್ದಾಗಿಯಾಗಲಿ ತಲುಪಿಸಬೇಕು. ವಿಳಾಸ: ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಶ್ರೀ ಶಾಮನೂರು ಶಿವಶಂಕರಪ್ಪ ರೆಡ್ ಕ್ರಾಸ್ ಭವನ, ನಂ. 302, ’ಎ’ ಬ್ಲಾಕ್, ದೇವರಾಜ ಅರಸು ಬಡಾವಣೆ, ದಾವಣಗೆರೆ. ದೂರವಾಣಿ: 08192-252550.