ಮಲೇಬೆನ್ನೂರು, ಅ.20- ಸಂಕ್ಲೀಪುರ ಗ್ರಾಮದ ಬಳಿ ತೋಟದಲ್ಲಿ ಶನಿವಾರ ಮಧ್ಯಾಹ್ನ 2 ದೊಡ್ಡ ಚಿರತೆಗಳು ಕಾಣಿಸಿಕೊಂಡಿದ್ದು, ಸಂಕ್ಲೀಪುರ, ಮಲ್ಲನಾಯ್ಕನಹಳ್ಳಿ, ಯರಲಬನ್ನಿಕೋಡು, ಕೆಂಗಲಹಳ್ಳಿ ಗ್ರಾಮಸ್ಥರು ಭಯಭೀತರಾಗಿದ್ದಾರೆ.
ಸಂಕ್ಲೀಪುರ ಗ್ರಾಮದ ಕಂದಗಲ್ ವೀರೇಶ್ ಅವರ ತೋಟದಲ್ಲಿ ಚಿರತೆಗಳು ಕೂಗುತ್ತಿದ್ದನ್ನು ನೋಡಿದ ವೀರೇಶ್ ಅವರು, ಭಯದಿಂದ ಓಡಿ ಬಂದಿದ್ದಾರೆ ಎನ್ನಲಾಗಿದೆ. ವಿಷಯ ತಿಳಿದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಸಂಜೆ ಸ್ಥಳಕ್ಕೆ ಭೇಟಿ ನೀಡಿದ್ದಾರೆ.