ನಂದಿಗಾವಿಯಲ್ಲಿ ಮಳೆಗೆ ಮನೆ ಕುಸಿದು ಗಾಯ

ಮಲೇಬೆನ್ನೂರು, ಅ.17- ನಂದಿಗಾವಿ ಗ್ರಾಮದಲ್ಲಿ ಮಳೆಯಿಂದಾಗಿ ಮನೆಯೊಂದು ಕುಸಿದು ಬಿದ್ದ ಪರಿಣಾಮ ತಾಯಿ – ಮಗಳು ಮತ್ತು ಮೊಮ್ಮಗಳು ಗಾಯಗೊಂಡಿರುವ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ.

ಗ್ರಾಮದ ಎ.ಕೆ.ಕಾಲೋನಿಯ ಪಕ್ಕೀರಮ್ಮ ಇವರ ಮನೆಯಲ್ಲಿ ಈ ಘಟನೆ ನಡೆದಿದ್ದು, ಘಟನೆಯಲ್ಲಿ ಪಕ್ಕೀರಮ್ಮ ಮತ್ತು ಮಗಳಾದ ಸಿದ್ದಮ್ಮ ಪರಸಪ್ಪ ಹಾಗೂ ಮೊಮ್ಮಗಳಾದ ಯಮುನಾ (6 ವರ್ಷ) ಇವರು ಗಾಯಗೊಂಡು, ದಾವಣಗೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಘಟನೆಯ ವಿಷಯ ತಿಳಿದ ತಕ್ಷಣ ಗ್ರಾಮ ಲೆಕ್ಕಾಧಿಕಾರಿ ವಿಜಯ ಮಹಾಂತೇಶ್ ಸ್ಪಂದಿಸಿ, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಸಾವು – ಬದುಕಿನ ಮಧ್ಯ ಹೋರಾಟ ಮಾಡುತ್ತಿರುವ ಪುಟ್ಟ ಬಾಲಕಿ ಯಮುನಾ ಅವರ ಆರೋಗ್ಯ ವಿಚಾರಿಸಿದ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು, ತಂದೆ-ತಾಯಿ, ಅಜ್ಜಿಗೆ ಧೈರ್ಯ ಹೇಳಿ, ಉಚಿತ ಚಿಕಿತ್ಸೆ ಕೊಡಿಸುವುದಾಗಿ ಹೇಳಿದ್ದಾರೆ.

error: Content is protected !!