ಕಲಾಕುಂಚದಿಂದ ದೀಪಾವಳಿ, ರಾಜ್ಯೋತ್ಸವ, ಸಾಂಸ್ಕೃತಿಕ ಸಂಭ್ರಮ

ದಾವಣಗೆರೆ, ಅ. 17 – ನಗರದ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ ದೀಪಾವಳಿ, ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಸಾರ್ವಜನಿಕವಾಗಿ ಪುರುಷರಿಗೆ, ಮಹಿಳೆಯರಿಗೆ, ಮಕ್ಕಳಿಗೆ ಉಚಿತವಾಗಿ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.

ಇದೇ ದಿನಾಂಕ 27 ರ ಭಾನುವಾರ ಮಧ್ಯಾಹ್ನ 3 ಗಂಟೆಯಿಂದ ಕಲಾಕುಂಚ ಕಛೇರಿ ಸಭಾಂಗಣದಲ್ಲಿ ನಡೆಯಲಿರುವ ಮಕ್ಕಳಿಗೆ ಆಟೋಟ ಸ್ಪರ್ಧೆ, ಮಹಿಳೆಯರಿಗೆ ಆಕರ್ಷಕ ಗೃಹಿಣಿ ಸ್ಪರ್ಧೆ, ಸಾರ್ವಜನಿಕವಾಗಿ ಮಹಾಭಾರತ, ರಾಮಾಯಣ, ದಾವಣಗೆರೆಯ ಇತಿಹಾಸದ ಕುರಿತು ರಸಪ್ರಶ್ನೆ, ಜಾಣ ಗಣಿತ, ಜಾಣ ಒಗಟು, ಆಕರ್ಷಕ ದಂಪತಿಗಳು ಸ್ಪರ್ಧೆಗಳು ಏರ್ಪಾಡಾಗಿವೆ.

ಆಸಕ್ತರು ಇದೇ ದಿನಾಂಕ 20ರೊಳಗೆ 99457 85170 ಈ ವ್ಯಾಟ್ಸಾಪ್ ನಂಬರ್‍ಗೆ ಹೆಸರು ನೋಂದಾಯಿಸಬೇಕು ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ.ಸಿ. ಉಮೇಶ್ ತಿಳಿಸಿದ್ದಾರೆ.

error: Content is protected !!