17 ರಂದು ಸಾಮೂಹಿಕ ಶ್ರೀ ಗಾಯತ್ರಿ ಪೂಜೆ, ಉಪಾಸನೆ

ದಾವಣಗೆರೆ, ಅ. 15 – ನಗರದ ಶ್ರೀ ಗಾಯತ್ರಿ ದೇವಿಯ ಉಪಾಸಕರ ಕ್ರಿಯಾತ್ಮಕ ಅಧ್ಯಾತ್ಮ ಸಂಸ್ಥೆ ಶ್ರೀ ಗಾಯತ್ರಿ ಪರಿವಾರದಿಂದ ಪ್ರತೀ ತಿಂಗಳ ಹುಣ್ಣಿಮೆಯೆಂದು ನಗರದ ಜಯದೇವ ವೃತ್ತದಲ್ಲಿರುವ
ಶ್ರೀ ಶಂಕರ ಮಠದಲ್ಲಿ ನಡೆಸುವ ಸಾಮೂಹಿಕ ಶ್ರೀ ಗಾಯತ್ರಿ ಪೂಜೆ, ಉಪಾಸನೆ, ಶೀಗಿ ಹುಣ್ಣಿಮೆ ಅಂಗವಾಗಿ ನಾಡಿದ್ದು ದಿನಾಂಕ 17 ರ ಗುರುವಾರ ಬೆಳಿಗ್ಗೆ 7 ಕ್ಕೆ ನಡೆಯಲಿದೆ ಎಂದು ಪರಿವಾರದ ಅಧ್ಯಕ್ಷ ಡಾ. ರಮೇಶ್ ಪಟೇಲ್  ತಿಳಿಸಿದ್ದಾರೆ. ಕೆ.ಹೆಚ್. ಮಂಜುನಾಥ್ ಮತ್ತು ಕುಟುಂಬದವರು ಪೂಜಾ ಸೇವಾಕರ್ತರಾಗಿದ್ದಾರೆ ಎಂದು ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.

error: Content is protected !!