ಹರಿಹರ,ಅ.13- ಲಘು ನೀರಾವರಿ ಯೋಜನೆ (ಪಿಎಂಕೆಎಸ್‌ವೈ) ಅಡಿಯಲ್ಲಿ ರೈತರು ತುಂತುರು ನೀರಾವರಿ ಘಟಕಗಳನ್ನು ಪಡೆಯಲು ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳಿಗೆ ಅರ್ಜಿ ಸಲ್ಲಿಸುವಂತೆ ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ಎಲ್ಲಾ ಸಾಮಾನ್ಯ, ಪ.ಜಾತಿ ಮತ್ತು ಪ.ಪಂಗಡದ ರೈತರಿಗೆ ಶೇ.90 ರಿಯಾ ಯತಿ ದರದಲ್ಲಿ ಘಟಕಗಳನ್ನು ವಿತರಿಸಲಾ ಗುವುದು. ಹಾಗೆಯೇ 2024-25ನೇ ಸಾಲಿನ ಕೃಷಿ ಸಂಸ್ಕರಣೆ ಯೋಜನೆಯಡಿ ಸಂಸ್ಕರಣ ಘಟಕಗಳಾದ ಹಿಟ್ಟಿನ ಗಿರಣಿ, ಕಾರಪುಡಿ ಮಷೀನ್, ಶಾವಿಗೆ ಮಷೀನ್, ಎಣ್ಣೆಗಾಣ, ರಾಗಿ ಕ್ಲೀನಿಂಗ್ ಮಷೀನ್ ಇತ್ಯಾದಿ ಘಟಕಗಳನ್ನು ಪಡೆಯಲೂ ಸಹ ರೈತರು ಅರ್ಜಿ ಸಲ್ಲಿಸಬಹುದು. ಈ ಯೋಜನೆ ಅಡಿ ಸಾಮಾನ್ಯ ರೈತರಿಗೆ ಶೇ. 50 ಮತ್ತು ಎಸ್.ಸಿ ಮತ್ತು ಎಸ್.ಟಿ ರೈತರಿಗೆ ಶೇ. 90 ಸಹಾಯಧನ ಅಡಿ ಯಲ್ಲಿ ಘಟಕಗಳನ್ನು ವಿತರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.