ದಾವಣಗೆರೆ, ಅ.8- ನಗರದ ಜೆ.ಹೆಚ್. ಪಟೇಲ್ ಬಡಾವಣೆಯಲ್ಲಿ ದಸರಾ ಹಬ್ಬದ ಪ್ರಯುಕ್ತ ಶ್ರೀ ಮಾತಾ ಪಂಚವಟಿ ನಾಗಕಾಳಿಕಾ ದೇವಿಯ 31 ನೇ ವರ್ಷದ ಶರನ್ನವರಾತ್ರಿಯ ಮಹಾ ಪೂಜಾ ಕಾರ್ಯಕ್ರಮ ಹಾಗೂ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ.
ಇದೇ ದಿನಾಂಕ 11 ರಂದು ಆಯುಧ ಪೂಜೆ, ಮಧ್ಯಾಹ್ನ 12.15ಕ್ಕೆ ವಿಶೇಷ ಪೂಜೆ ಹಾಗೂ ಪ್ರಸಾದ ವಿನಿಯೋಗವಿರುತ್ತದೆ. ಇದೇ ದಿನಾಂಕ 12 ರಂದು ವಿಜಯದಶಮಿಯಂದು ಸುಮಂಗಲಿಯರಿಗೆ ಉಡಿ ತುಂಬುವ ಸೇವೆಯನ್ನು ಮಾಡಲಾಗುವುದು.