ವಿಶ್ವ ಹಿಂದೂ ಪರಿಷದ್ ಮತ್ತು ಸಾರ್ವಜನಿಕ ವಿಜಯ ದಶಮಿ ಮಹೋತ್ಸವ ಸಮಿತಿ ವತಿಯಿಂದ ಸಾರ್ವಜನಿಕ ವಿಜಯ ದಶಮಿ ಕಾರ್ಯಕ್ರಮದ ಅಂಗ ವಾಗಿ ಇಂದು ಸಂಜೆ 6 ರಿಂದ 8 ರವರೆಗೆ ಪಿ.ಬಿ. ರಸ್ತೆಯ ಶ್ರೀ ಬೀರಲಿಂಗೇಶ್ವರ ಮೈದಾನದಲ್ಲಿ ಶ್ರೀ ವೀರೇಶ್ವರ ಪುಣ್ಯಾಶ್ರಮದ ಶ್ರೀ ಗುರು ಪ. ಪಂಚಾಕ್ಷರ ಕವಿ ಗವಾಯಿಗಳವರ ಅಂಧರ ಶಿಕ್ಷಣ ಸಮಿತಿ ವಿದ್ಯಾರ್ಥಿಗಳಿಂದ ಸಂಗೀತ ಮತ್ತು ತಬಲಾ ವಾದ್ಯ ಕಾರ್ಯಕ್ರಮ ಏರ್ಪಡಿಸಲಾಗಿದೆ. ಇದಕ್ಕೂ ಮುನ್ನ ಸಂಜೆ 4.30 ರಿಂದ 5.30 ರವರೆಗೆ ರಾಷ್ಟ್ರ ಸೇವಿಕಾ ಸಮಿತಿ ವತಿಯಿಂದ ಲಲಿತಾ ಸಹಸ್ರನಾಮ ಹಾಗೂ ದೇವಿ ಭಜನಾ ಪಠಣ ಮಾಡಲಾಗುವುದು.
January 20, 2025