ನಾಡ ಹಬ್ಬ ದಸರಾ ಪ್ರಯುಕ್ತ ರಾಣೇಬೆನ್ನೂರಿನ ಕರ್ನಾಟಕ ಸಂಘದ ವತಿಯಿಂದ ನಗರದ ಆಲೂರು ವೆಂಕಟರಾವ್ ರಂಗಮಂದಿರದ ಕಾಳಿದಾಸ ನಾಯ್ಕ ವೇದಿಕೆಯಲ್ಲಿ ಇಂದು ಸಂಜೆ 6.30 ಕ್ಕೆ ಅಶ್ವಿನಿ ಎನ್. ಮೈಸೂರು ಇವರಿಂದ `ವೀಣಾ ವಾದನ’ ಕಾರ್ಯಕ್ರಮ ನಡೆಯಲಿದೆ. ಕರ್ನಾಟಕ ಸಂಘದ ಅಧ್ಯಕ್ಷ ಸಂಜೀವ ಶಿರಹಟ್ಟಿ ಅಧ್ಯಕ್ಷತೆ ವಹಿಸುವರು. ಸಾಹಿತಿ, ಚಲನಚಿತ್ರ ಕಲಾವಿದ ಸುರೇಶ್ ಕಣೀಕಲ್ ಹಾವೇರಿ, ರಾಣೇಬೆನ್ನೂರು ನಗರಸಭೆ ಸದಸ್ಯೆ ತ್ರಿವೇಣಿ ನಾ ಪವಾರ್ ಭಾಗವಹಿಸಲಿದ್ದಾರೆ.
January 11, 2025