ಶ್ರೀ ಕನ್ಯಕಾಪರಮೇಶ್ವರಿ ದೇವಸ್ಥಾನ ಸಂಘದ ವತಿಯಿಂದ ಶ್ರೀ ಶರನ್ನವರಾತ್ರಿ ಪ್ರಯುಕ್ತ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಇಂದು ಅಮ್ಮನವರಿಗೆ ಮಾಹೇಶ್ವರಿ ದೇವಿ ಅಲಂಕಾರ ಮಾಡಲಾಗುವುದು. ಪ್ರತಿ ದಿನ ಸಂಜೆ 5 ರಿಂದ 6 ರವರೆಗೆ ವಾಸವಿ ಭಜನಾ ಮಂಡಳಿಯವರಿಂದ ಲಲಿತ ಸಹಸ್ರ ನಾಮಾರ್ಚನೆ, ಹೇಮಾ ಶ್ರೀನಿವಾಸ್ ಸಂಗಡಿಗರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಪ್ರತಿ ದಿನ ಸಂಜೆ 7.30 ರಿಂದ ಪ್ರಾಕಾರೋತ್ಸವ, ಕುಂಕುಮಾರ್ಚನೆ, ಮಂತ್ರ ಪುಷ್ಪ, ಅಷ್ಟಾವಧಾನ, ಮಹಾಮಂಗಳಾರತಿ ನಂತರ ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ.
December 22, 2024