ನಗರದಲ್ಲಿ ಇಂದು-ನಾಳೆ ದೃಶ್ಯಕಲಾ ಮಹಾವಿದ್ಯಾಲಯದ `ಕಲಾ ಪಯಣ ಅನ್ವೇಷಣೆ ಪಥದಲ್ಲಿ’ ಕಾರ್ಯಕ್ರಮ

ದಾವಣಗೆರೆ, ಅ. 3- ವಿಶ್ವವಿದ್ಯಾನಿಲಯ ದೃಶ್ಯ ಕಲಾ ಮಹಾವಿದ್ಯಾಲಯದ 60 ವರ್ಷಗಳ ಕಲಾ ಪಯಣ (1964-2024) ಅನ್ವೇಷಣೆಯ ಪಥದಲ್ಲಿ ಕಾರ್ಯಕ್ರಮ ನಾಳೆ ದಿನಾಂಕ 4 ರಿಂದ 6 ರವರೆಗೆ  ಮಹಾವಿದ್ಯಾಲಯದ ಸಭಾಂಗಣದಲ್ಲಿ ನಡೆಯಲಿದೆ ಎಂದು ಮಹಾವಿದ್ಯಾಲಯದ ಬೋಧಕರಾದ ದತ್ತಾತ್ರೇಯ ಎನ್. ಭಟ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಾಳೆ ದಿನಾಂಕ 4 ರ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಕಲಾ ಪ್ರದರ್ಶನವನ್ನು ದಾವಣಗೆರೆ ವಿವಿ ಕುಲಪತಿ ಪ್ರೊ.ಬಿ.ಡಿ. ಕುಂಬಾರ್ ಉದ್ಘಾಟಿಸುವರು. ಇದೇ ವೇಳೆ ವರ್ಣ ಚಿತ್ರಗಳ ಸಮೂಹ ಪ್ರದರ್ಶನ ಮತ್ತು ಶ್ರೇಷ್ಠ ಕಲಾ ಪ್ರಶಸ್ತಿಗೆ ಚಾಲನೆ ನೀಡಲಾಗುವುದು ಎಂದರು.

ಕಲಾ ಪ್ರೇಮಿ ದಿ. ಬಿದರೆ ನಾರಾಯಣ ರಾವ್ ಅವರ ಸವಿನೆನಪಿಗಾಗಿ ವಾರ್ಷಿಕ ಕಲಾ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಹಿರಿಯ ಕಲಾವಿದ ಎ. ಮಹಾಲಿಂಗಪ್ಪ, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯೆ ಆಶಾರಾಣಿ ನಡೋಣಿ, ಡಾ. ವಿಠಲರೆಡ್ಡಿ ಎಫ್ ಚುಳಕಿ, ದಾವಣಗೆರೆ ವಿಶ್ವವಿದ್ಯಾನಿಲಯ ದೃಶ್ಯ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಜೈರಾಜ್ ಚಿಕ್ಕಪಾಟೀಲ್, ಶ್ರೀನಾಥ್ ಬಿದರೆ ಭಾಗವಹಿಸಲಿದ್ದಾರೆ.

ಮಧ್ಯಾಹ್ನ 12 ಕ್ಕೆ ದಿ. ಬಿದರೆ ನಾರಾಯಣರಾವ್ ಅವರ ಸವಿನೆನಪಿಗಾಗಿ ವಾರ್ಷಿಕ ಪ್ರಶಸ್ತಿ ನೀಡಲಾಗುವುದು. 2.30 ಕ್ಕೆ ಭಾವಚಿತ್ರ ಕಲೆಯ ಪ್ರಾತ್ಯಕ್ಷಿಕೆ ನಡೆಸಲಾಗುವುದು.

ನಾಳೆ ದಿನಾಂಕ 5 ರಂದು ದಿ ಆರ್ಟ್, ಯುಎಕ್ಸ್ ಅಂಡ್ ಡಿಸೈನ್ ಇನ್ ಎಐಎ-ಡೈವನ್ ಪ್ಯೂಚರ್ ಕುರಿತು ಮಾಹಿತಿ ನೀಡುವರು. 

ಪತ್ರಿಕಾಗೋಷ್ಠಿಯಲ್ಲಿ ಡಾ. ಬಾಬುರಾವ್ ನಡೋಣಿ, ಆಶಾರಾಣಿ ನಡೋಣಿ, ಶ್ರೀನಾಥ್ ಬಿದರೆ, ಕುಬೇರಪ್ಪ ಮತ್ತಿತರರು ಉಪಸ್ಥಿತರಿದ್ದರು.

error: Content is protected !!