ಶ್ರೀ ಜಯದೇವ ಮುರುಘರಾಜೇಂದ್ರ ವೃತ್ತದ ಬಳಿ ಇರುವ ಶ್ರೀ ಶಂಕರ ಮಠದಲ್ಲಿ ನವರಾತ್ರಿ ಅಂಗವಾಗಿ ವಿವಿಧ ಧಾರ್ಮಿಕ ವಿಧಿ ವಿಧಾನಗಳು, ಹೋಮಗಳು, ವಿಶೇಷ ಅಲಂಕಾರ, ಪೂಜಾ ಕಾರ್ಯಗಳು ಜರುಗಲಿವೆ.
ಇಂದು ಬೆಳಿಗ್ಗೆ 7 ಕ್ಕೆ ಮಹಾಗಣಪತಿ ಪೂಜೆ, ಪುಣ್ಯಾಹವಾಚನ, ದೇವನಾಂದಿ ಋತ್ವಿಗ್ರರಣೆ, ಮಹಾಸಂಕಲ್ಪ, ಅಂಕುರಾರ್ಪಣೆ, ದೀಪಸ್ಥಾಪನೆ, ಮಹಾಗಣಪತಿ ಹೋಮ, ನವಗ್ರಹ ಹೋಮ, ಶೈಲಪುತ್ರಿ ಆರಾಧನೆ, ಚಂಡಿಕಾ ಹೋಮ, ಸುಮಂಗಲಿ, ಕನ್ನಿಕಾಪೂಜೆ, 1.30 ಕ್ಕೆ ಪೂರ್ಣಾಹುತಿ, ಪ್ರಸಾದ ವಿನಿಯೋಗ, ಸಂಜೆ 6.30 ರಿಂದ ದುರ್ಗಾದೀಪ ನಮಸ್ಕಾರ, ದುರ್ಗಾಸಪ್ತಶತಿ ಪಾರಾಯಣ, ದೀಪರಾಧನೆ, ಅಷ್ಟಾವಧಾನ ಸೇವೆ, 8.30 ಕ್ಕೆ ಪ್ರಸಾದ ವಿನಿಯೋಗ ನಡೆಯಲಿದೆ.