ದಾವಣಗೆೆರೆಯ ಅಲ್ತಾಫ್ ವಿವಾಹವಾಗಿದ್ದ ಪಾಕ್‌ನ ಫಾತಿಮಾ
ನಿಶಾ ಶರ್ಮಾ ಎಂದು ಹೆಸರು ಬದಲು
ದಾವಣಗೆರೆ, ಸೆ.2- ಪಾಕಿಸ್ತಾನದ ಮಹಿಳೆಯನ್ನು ಮದುವೆಯಾಗಿದ್ದ ದಾವಣಗೆರೆ ಯುವಕ ಹಾಗೂ ಕುಟುಂಬ ಸದಸ್ಯರು ಸೇರಿದಂತೆ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.
ಬಂಧಿತರನ್ನು ಮೊಹಮ್ಮದ್ ಹನೀಫ್, ರುಬೀನಾ, ಆಯೇಶ್ ಹನೀಫ್, ಮೊಹಮ್ಮದ್ ಯಾಸಿನ್, ಜೈನಾಬಿ ನೂರ್, ಫಾತಿಮಾ, ಅಲ್ತಾಫ್ ಎನ್ನಲಾಗಿದೆ.
ಇಲ್ಲಿನ ಶಿವಕುಮಾರಸ್ವಾಮಿ ಬಡಾವಣೆಯಲ್ಲಿ ವಾಸವಾಗಿದ್ದ ಖಲಂದರ್ ಅವರ ಪುತ್ರ ಅಲ್ತಾಫ್ ಅಹ್ಮದ್ ಪಾಕಿಸ್ತಾನ ಮೂಲದ ಫಾತಿಮಾ ಅಲಿಯಾಸ್ ನಿಶಾ ಶರ್ಮಾ ಜೊತೆ ಪ್ರೇಮಾಂಕುರವಾಗಿ ಮದುವೆಯಾಗಿದ್ದ.
ಮದುವೆಯಾದ ಬಳಿಕ ಅಲ್ತಾಫ್ ಅಹ್ಮದ್ ಜೊತೆ ದಾವಣಗೆರೆ ಶಿವಕುಮಾರ ಸ್ವಾಮಿ ಬಡಾವಣೆಯಲ್ಲಿನ ಮನೆಗೆ ಫಾತಿಮಾ ಅಲಿಯಾಸ್ ನಿಶಾ ಶರ್ಮಾ ಬಂದು ಹೋಗುತ್ತಿದ್ದಳು. ಇವಳಿಗೆ ಕನ್ನಡ ಭಾಷೆ ಬರುತ್ತಿರಲಿಲ್ಲ. ಹಿಂದಿ, ಉರ್ದು ಭಾಷೆಯಲ್ಲಿ ಮಾತನಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಫಾತಿಮಾ ಹೆಸರಿನವಳಾದ ಈಕೆ ಹಿಂದೂ ಹೆಸರಿನಲ್ಲಿ ಆಧಾರ್ ಕಾರ್ಡ್, ಪಾಸ್ ಪೋರ್ಟ್ ಹೊಂದಿದ್ದಳು. ನಿಶಾ ಶರ್ಮಾ ಎಂದು ಹೆಸರು ಬದಲಿಸಿದ್ದ ಈಕೆ ಆಧಾರ್ ಕಾರ್ಡ್, ಪಾಸ್ ಪೋರ್ಟ್ ನಲ್ಲಿಯೂ ಇದೇ ಹೆಸರಿತ್ತು. ತಂದೆ ಹೆಸರು ರಾಮಬಾಬು ಶರ್ಮಾ ಎಂದು ಆಧಾರ್ ಕಾರ್ಡ್ ಮಾಡಿಸಿದ್ದ ಈಕೆಯು ಚೆನ್ನೈ ವಿಮಾನ ನಿಲ್ದಾಣದ ಬಳಿ ಸೆರೆ ಸಿಕ್ಕ ಬಳಿಕ ಮಾಹಿತಿ ಹೊರ ಬಿದ್ದಿದೆ ಎನ್ನಲಾಗಿದೆ.
ಏತನ್ಮಧ್ಯೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಾವಣಗೆರೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ, ಯಾರನ್ನೂ ಬಂಧಿಸಿಲ್ಲ ಎಂದು ಜಿಲ್ಲಾ ಪೊಲೀಸ್ ಇಲಾಖೆ ತಿಳಿಸಿದೆ.