ದಾವಣಗೆರೆ, ಸೆ.27- ರಾಜ್ಯ ಪವರ್ ಲಿಫ್ಟರ್ಸ್ ಅಸೋಸಿಯೇಷನ್ ಹಾಗೂ ಬೆಂಗಳೂರಿನ ರಾಕ್ ಫಿಟ್ ಅಲ್ಟ್ರಾ ಜಿಮ್ ಸಹಯೋಗದಲ್ಲಿ ನಾಡಿದ್ದು ದಿನಾಂಕ 29ರ ಬೆಳಗ್ಗೆ 9ಕ್ಕೆ ಬೆಂಗಳೂರಿನ ಬಿಜಿಎಸ್ ಆಟದ ಮೈದಾನದಲ್ಲಿ ರಾಜ್ಯ ಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆ ನಡೆಯಲಿದೆ ಎಂದು ಅಸೋಸಿಯೇಷನ್ ಕಾರ್ಯದರ್ಶಿ ಲಕ್ಷ್ಮಿ ದೇವಿ ದಯಾನಂದ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಬೆಂಗಳೂರಿನ ಗೋವಿಂದರಾಜು ನಗರ ಶಾಸಕ ಪ್ರಿಯಕೃಷ್ಣ ಅವರ ನೇತೃತ್ವದಲ್ಲಿ ಸ್ಪರ್ಧೆ ಆಯೋಜನೆ ಮಾಡಿದ್ದಾರೆ ಎಂದರು. ಸಂಘಟನೆಯ ಪ್ರಮುಖರಾದ ದಿನೇಶ್ ಕೆ. ಶೆಟ್ಟಿ, ಗುರುಸ್ವಾಮಿ, ಎಚ್.ವೈ. ಶಶಿಧರ್, ಜಿ. ಗೋಪಾಲ್ ಹನುಮಂತಪ್ಪ ಮತ್ತು ಇತರರು ಸುದ್ದಿಗೋಷ್ಠಿಯಲ್ಲಿದ್ದರು.
March 15, 2025