ಹರಪನಹಳ್ಳಿ, ಸೆ. 25 – ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಆರ್.ಎಸ್.ಎಲ್. ಶಾಲೆಯ 7ನೇ ತರಗತಿಯ ಕೆ. ಉಮರ್ ಫಾರೂಕ್ 100 ಮೀಟರ್ ಓಟ, 200 ಮೀಟರ್ ಓಟ ಮತ್ತು ಉದ್ದ ಜಿಗಿತದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾನೆ. ಕೆ.ಸಿ.ಎ. ಆಂಗ್ಲ ಮಾಧ್ಯಮ ಪ್ರೌಢಶಾಲೆಯ 10ನೇ ತರಗತಿಯ ಕು. ಅಮೂಲ್ಯ ಕೆ.ಆರ್. ಮತ್ತು ಅನುಷ ಹೆಚ್. ಚದುರಂಗದಲ್ಲಿ ಪ್ರಥಮ ಸ್ಥಾನಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
January 7, 2025