ದಾವಣಗೆರೆ – ಶಿವಮೊಗ್ಗ ನೇರ ಬಸ್ಸಿನ ಸಂಚಾರಕ್ಕೆ ಅಭಿನಂದಿಸಿದ ಪ್ರತಿಷ್ಠಾನ

ದಾವಣಗೆರೆ, ಸೆ. 25 – ನಗರದಿಂದ ಶಿವಮೊಗ್ಗ ನಗರಕ್ಕೆ ನೇರ ಬಸ್ಸಿನ ಅಭಾವದ ಬಗ್ಗೆ ಜಿಲ್ಲಾ ಮಂತ್ರಿಗಳಿಗೆ ಮತ್ತು ಸಂಸತ್ ಸದಸ್ಯರಿಗೆ ಮತ್ತು ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ ಕೆಲವೇ ದಿನಗಳಲ್ಲಿ ಬಸ್ ಸಂಚಾರ ಆರಂಭಿಸಿರುವುದಕ್ಕೆ ಕಿತ್ತೂರು ರಾಣಿ ಚೆನ್ನಮ್ಮ ಪ್ರತಿಷ್ಠಾನ ಅಭಿನಂದಿಸಿದೆ.

ನಗರದ ಬಸ್ ನಿಲ್ದಾಣಕ್ಕೆ ಚಾಲನೆ ನೀಡುವ ಮೂಲಕ ಸದರಿ ಬಸ್ ಸ್ಟ್ಯಾಂಡ್‌ಗೆ ಮಾಜಿ ನಗರ ಸಭಾಧ್ಯಕ್ಷರು, ಮಾಜಿ ಶಾಸಕರು ಆದ ಕಾಂ. ಪಂಪಾಪತಿ ಅವರ ಹೆಸರನ್ನು ನಾಮಕರಣ ಮಾಡುವುದಾಗಿ ಘೋಷಿಸಿರುವುದರಿಂದ ಶಾಸಕ ಶಾಮನೂರು ಶಿವಶಂಕರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಪ್ರತಿಷ್ಠಾನದ ಪದಾಧಿಕಾರಿಗಳಾದ ಡಾ. ಕೆ.ಎಸ್. ಗಂಗಾಧರ, ಹೆಚ್. ಜಯಣ್ಣ, ಕಾಯಿಪೇಟೆ ಹಾಲೇಶ್, ಬಿ.ವಿ. ರಾಜಶೇಖರ, ಅಂಜಿನಪ್ಪ ವಕೀಲರು, ಎ.ಎಸ್. ಮೃತ್ಯುಂಜಯ, ಕೊಳೇನಹಳ್ಳಿ ಶರಣಪ್ಪ, ಮಲ್ಲಿಕಾರ್ಜುನ ಕಟ್ಟಿಮನಿ, ವಿ. ಶಿವಮೂರ್ತಿ ಸ್ವಾಮಿ, ಗೀತಾ ಪ್ರಶಾಂತ್, ಶ್ರೀಮತಿ ಶೈಲಜಾ, ಎಸ್.ಎಂ. ಚರಂತಿ ಮಠ್, ಪಿ. ಮಂಜುನಾಥ್, ಅಕ್ಕಿ ರಾಮಚಂದ್ರ ಹೆಚ್, ಕೋಗುಂಡಿ ಸುರೇಶ್, ಅಣಜಿ ಪ್ರಶಾಂತ್ ಶೆಟ್ರು ಅಭಿನಂದಿಸಿದ್ದಾರೆ.

error: Content is protected !!