ದಾವಣಗೆರೆ, ಸೆ.19- ವಿಶೇಷ ಓಲಂಪಿಕ್ ಭಾರತ ವತಿಯಿಂದ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಸೆ.1ರಿಂದ 5ರ ವರೆಗೆ ನಡೆದ `ಬಾಚಿ ಕ್ರೀಡಾ ಕೂಟದಲ್ಲಿ’ ನಗರದ ಅಂಗವಿಕಲರ ಆಶಾಕಿರಣ ಬುದ್ಧಿಮಾಂದ್ಯ ಮಕ್ಕಳ ವಸತಿಯುತ ಶಾಲೆಯ ಕೆ.ಪಿ. ಕಿರಣ್ ಪ್ರಥಮ ಸ್ಥಾನದೊಂದಿಗೆ 2 ಚಿನ್ನದ ಪಡೆದು ಜಿಲ್ಲೆ ಮತ್ತು ರಾಜ್ಯದ ಕೀರ್ತಿ ಹೆಚ್ಚಿಸಿದ್ದಾರೆ. ಕ್ರೀಡಾಪಟು ಕಿರಣ್ ಅವರು ಓ. ಚಿಕ್ಕಪ್ಪ ಅವರ ತರಬೇತಿಯಲ್ಲಿ ಬೆಳೆದಿದ್ದು, ಇವರ ಸಾಧನೆಗೆ ಶಾಲೆಯ ಅಧ್ಯಕ್ಷ ರಮಣಲಾಲ್ ಹಾಗೂ ಸಿಬ್ಬಂದಿ ಹರ್ಷ ವ್ಯಕ್ತ ಪಡಿಸಿದೆ.
January 24, 2025