ದಾವಣಗೆರೆ, ಸೆ. 17- ಸಾಮಾಜಿಕ ಜಾಲ ತಾಣಗಳಲ್ಲಿ ಧಾರ್ಮಿಕ ಪ್ರಚೋದನೆ ಪೋಸ್ಟ್ ಹಾಕಿದ್ದಕ್ಕೆ ಸಂಬಂಧಿಸಿದಂತೆ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ.
ಈದ್ ಮಿಲಾದ್ ಹಬ್ಬದ ಪ್ರಯುಕ್ತ ಒಂದು ಕೋಮಿನವರು ಹಸಿರು ಬಾವುಟನ್ನು ಅಹ್ಮದ್ ನಗರದ ಏರ್‌ಟೆಲ್ ಟವರ್ ಮೇಲೆ ಕಟ್ಟಿದ್ದು, ಇದನ್ನು ನೋಡಿ ಗಾಂಧಿ ನಗರದ ವಾಸಿ ಪ್ರಜ್ವಲ್ ಸೆ.15ರಂದು ಬೆಳಿಗ್ಗೆ ಟವರ್ ಹತ್ತಿ ಹಸಿರು ಬಾವುಟದ ಮೇಲೆ ಭಾಗವ ಧ್ವಜ ಕಟ್ಟಿ ಮೊಬೈಲ್‌ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲ ತಾಣಗಳಲ್ಲಿ ಹಾಕಿದ್ದಾನೆ. ಕೋಮು ಹಿಂಸೆಗೆ ಪ್ರೇರೇಪಿಸಿದ ಕಾರಣಕ್ಕಾಗಿ ಪ್ರಜ್ವರ್ ವಿರುದ್ಧ ಅಜಾದ್ ನಗರ ಠಾಣೆಯಲ್ಲಿ ದೂರು ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ಅಜಾದ್ ನಗರ ಏರ್‌ಟೆಲ್ ಟವರ್ ಮೇಲೆ ಹಸಿರು ಬಾವುಟ ನೋಡಿದ ಗಣೇಶ್ ಅಲಿಯಾಸ್ ಕ್ರಾಕ್ ಗಣಿ ಉದ್ದೇಶ ಪೂರ್ವಕವಾಗಿ ಹಸಿರು ಬಾವುಟದ ಮೇಲೆ ಭಾಗವಧ್ವಜ ಕಟ್ಟಲು ಏರುತ್ತಿರು ವುದನ್ನು ಮೊಬೈಲ್‌ನಲ್ಲಿ ಚಿತ್ರಿಸಿಕೊಂಡು ಸಾಮಾಜಿಕ ಜಾಲ ತಾಣದಲ್ಲಿ ಹಾಕಿದ್ದಾನೆ.ಇವನ ಮೇಲೂ ಸಹ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಎಸ್ಪಿ ಎಚ್ಚರಿಕೆ: ಸಾಮಾಜಿಕ ಜಾಲತಾಣಗಳಲ್ಲಿ ಧಾರ್ಮಿಕ ನಿಂದನೆ, ಕೋಮು ಪ್ರಚೋದನಕಾರಿ, ಸುಳ್ಳು ಸುದ್ದಿಗಳನ್ನು, ವ್ಯಕ್ತಿ ನಿಂದನೆ ಪೋಸ್ಟ್ ಗಳನ್ನು ಮಾಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಎಚ್ಚರಿಸಿದ್ದಾರೆ.
ಯುವಕರು, ಶಾಲಾ ಕಾಲೇಜ್ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣ ಗಳಲ್ಲಿ ಪೋಸ್ಟ್ ಮಾಡುವ ಮುಂಚೆ ಹೆಚ್ಚು ಜಾಗರೂಕತೆ ವಹಿಸಬೇಕು ಈ ಬಗ್ಗೆ ಪೋಷಕರುಗಳು ತಮ್ಮ ತಮ್ಮ ಮಕ್ಕಳಿಗೆ ಹಾಗೂ ಶಾಲಾ ಕಾಲೇಜುಗಳಲ್ಲಿ ಶಿಕ್ಷಕರು ಉಪನ್ಯಾಸಕರುಗಳು ಸೂಕ್ತ ತಿಳಿವಳಿಕೆ ನೀಡುವಂತೆ ಅವರು ಹೇಳಿದ್ದಾರೆ.