ವಿಶ್ವ ಶಾಂತಿ ದಿನಾಚರಣೆ: ನಗರದಲ್ಲಿ ನಾಳೆ ಕಾಲ್ನಡಿಗೆ ಜಾಥಾ

ದಾವಣಗೆರೆ, ಸೆ. 18 – ಭಾರತೀಯ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ನಾಡಿದ್ದು ದಿನಾಂಕ 21 ರ ಶನಿವಾರ ಬೆಳಿಗ್ಗೆ 7 ಗಂಟೆಗೆ ನಗರದ ಶ್ರೀ ಮೋತಿ ವೀರಪ್ಪ ಪಿ.ಯು ಕಾಲೇಜು ಆವರಣದಲ್ಲಿ ವಿಶ್ವ ಶಾಂತಿ ದಿನಾಚರಣೆ ಪ್ರಯುಕ್ತ ಮಾನವೀಯತೆಗಾಗಿ ನಡೆ ಎಂಬ ಧೇಯೋದ್ದೇಶದ ಮೇರೆಗೆ ಕಾಲ್ನಡಿಗೆ ಜಾಥಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮ ವನ್ನು ಜಿಲ್ಲಾಧಿಕಾರಿಯೂ ಆಗಿರುವ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಶಾಖೆಯ ಅಧ್ಯಕ್ಷ ಜಿ.ಎಂ. ಗಂಗಾಧರಸ್ವಾಮಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ ಉದ್ಘಾಟಿಸುವರು.

error: Content is protected !!